ನವದೆಹಲಿ, ಮಾ25(SS): ಚೌಕಿದಾರರು ಶ್ರೀಮಂತರಿಗೆ ಮಾತ್ರ ಕೆಲಸ ಮಾಡುತ್ತಿದ್ದು, ಬಡವರ ಬಗ್ಗೆ ಕಾಳಜಿ ಇಲ್ಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಚೌಕಿದಾರರು ಶ್ರೀಮಂತರ ಪರ ಮಾತ್ರ ಕೆಲಸ ಮಾಡುತ್ತಿದ್ದು, ಬಡವರ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿವೆ. ಚೌಕಿದಾರರು ಶ್ರೀಮಂತರಿಗೆ ಗಮನಕೊಡುತ್ತಿದೆ. ಅವರಿಗೆ ದೇಶದ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದ್ದಾರೆ.
ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸದ ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಕುಟುಂಬ ದಿನ ರಾತ್ರಿ ಶ್ರಮಪಡುತ್ತಿದ್ದಾರೆ. ಆದರೆ, ಅವರ ಬಾಕಿ ಪಾವತಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಟೀಕಿಸಿದ್ದಾರೆ.
ಕಬ್ಬು ಬೆಳೆಗಾರರಿಗೆ 10 ಸಾವಿರ ಕೋಟಿ ರೂಪಾಯಿ ಬಾಕಿಯನ್ನು ಉತ್ತರ ಪ್ರದೇಶ ಉಳಿಸಿಕೊಂಡಿರುವ ಬಗ್ಗೆ ಮಾಧ್ಯಮಗಳ ವರದಿಯನ್ನು ಟ್ವೀಟರ್ನಲ್ಲಿ ಪ್ರಿಯಾಂಕ ಗಾಂಧಿ ಹಂಚಿಕೊಂಡಿದ್ದಾರೆ.10 ಸಾವಿರ ಕೋಟಿ ಬಾಕಿ ಪಾವತಿಯಾಗದೆ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರ ಮಕ್ಕಳ ಶಿಕ್ಷಣ, ಆಹಾರ, ಆರೋಗ್ಯ ಮತ್ತು ಮುಂದಿನ ಬೆಳೆ ಉತ್ಪಾದನೆ ಎಲ್ಲವೂ ಸ್ಥಗಿತಗೊಂಡಿದೆ ಎಂದು ಅವರು ಕಿಡಿಕಾರಿದ್ದಾರೆ.