ನವದೆಹಲಿ, ಮಾ25(SS): ಪ್ರತಿಯೊಬ್ಬ ದೇಶಭಕ್ತರು ಯಾವುದೇ ಕಾರಣಕ್ಕೂ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯುವ ಒಂದೇ ಧ್ಯೇಯ ಹೊಂದಿರಬೇಕು ಎಂದು ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು. 2019ರಲ್ಲಿ ಅವರು ಅಧಿಕಾರಕ್ಕೆ ಬಂದರೆ, ಮೋದಿ ಎಂದೆಂದಿಗೂ ಪ್ರಧಾನಿಯಾಗಿಯೇ ಉಳಿಯುತ್ತಾರೆ. ಒಂದು ವೇಳೆ ಮತ್ತೆ ಮೋದಿ ಪ್ರಧಾನಿಯಾದರೆ ದೇಶದಲ್ಲಿ ಚುನಾವಣೆಯೇ ನಡೆಯುವುದಿಲ್ಲ. ಇಂದು ಮೋದಿ ಸರ್ಕಾರವನ್ನು ಯಾರಾದರೂ ಪ್ರಶ್ನಿಸಿದರೆ ಅವರನ್ನು ದೇಶ ದ್ರೋಹಿ ಎಂಬ ಪಟ್ಟ ಕಟ್ಟಲಾಗುತ್ತದೆ' ಎಂದು ದೂರಿದರು.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ ಒಂದು ವೇಳೆ ಬಿಜೆಪಿ ಗೆದ್ದರೆ 2019ರ ಚುನಾವಣೆ ಬಳಿಕ ಮತ್ತೆ ಎಂದಿಗೂ ಚುನಾವಣೆಯೇ ನಡೆಯುವುದಿಲ್ಲ. ಏಕೆಂದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಉಳಿದಿರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೇಜ್ರಿವಾಲ್ ದೇಶವನ್ನು ಆಳಲು ಮೋದಿ ಸರ್ಕಾರವು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರನ್ನು ಅನುಸರಿಸುತ್ತಿದೆ. ಪ್ರತಿಯೊಬ್ಬ ದೇಶಭಕ್ತರೂ ಯಾವುದೇ ಕಾರಣಕ್ಕೂ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯುವ ಒಂದೇ ಧ್ಯೇಯ ಹೊಂದಿರಬೇಕು. ಹೀಗಾಗಿ ಕೇಸರಿ ಪಕ್ಷದ ಸೋಲಿಗೆ ಶ್ರಮಿಸುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.