ಲಕ್ನೋ,ಮಾ25(AZM) : ಪ್ರಸಿದ್ಧ ಚಿತ್ರ ನಟಿ,ಸಮಾಜವಾದಿ ಪಕ್ಷದ ಮಾಜಿನಾಯಕಿ, ಜಯಪ್ರದ ಅವರು ಇಂದು ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಯಪ್ರದಾ ಅವರು ಉತ್ತರ ಪ್ರದೇಶದ ರಾಮಪುರದಿಂದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ವಿರುದ್ಧ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. 55 ವರ್ಷ ವಯಸ್ಸಿನ ಜಯಪ್ರದ ಅವರು ಸಮಾಜವಾದಿ ಪಕ್ಷದ ಟಿಕೆಟ್ ನಿಂದಲೇ ಎರಡು ಬಾರಿ ರಾಂಪುರದ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದ್ದರು. ಆದರೆ, 2010ರಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಜತೆಗಿನ ಕಿತ್ತಾಟದಿಂದಾಗಿ ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್ ಜತೆಯಲ್ಲಿಯೇ ಜಯಪ್ರದಾ ಅವರನ್ನು ಎಸ್ ಪಿ ಉಚ್ಛಾಟಿಸಿತ್ತು.
ಬಳಿಕ ಎನ್ ಡಿಎ ಯತ್ತ ಒಲವು ತೋರಿದ್ದ ಜಯಪ್ರದ ಬಿಜೆಪಿ ಸೇರುವ ಸೂಚನೆ ನೀಡಿದ್ದಾರೆ. ಹಾಗಾಗಿ ಇಂದು ಅವರು ಬಿಜೆಪಿಗೆ ಅಧಿಕೃತವಾಗಿ ಸೇರುವುದು ಖಚಿತವಾಗಿದ್ದು, ರಾಂಪುರದಿಂದ ಸ್ಪರ್ಧೆಗಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.