ಹೊಸದಿಲ್ಲಿ, ಮಾ.25(AZM): ಕನ್ಹಯ್ಯ ಕುಮಾರ್ ಸ್ಪರ್ಧಿಸುತ್ತಿರುವ ಬಿಹಾರದ ಬೇಗುಸರಾಯ್ ಕ್ಷೇತ್ರದಲ್ಲಿ ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಅವರು ಸ್ಪರ್ಧಿಸಲು ನಿರಾಕರಿಸಿದ್ದಾರೆ. ಈ ಕುರಿತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ದಿಲ್ಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿದ ಗಿರಿರಾಜ್ ತಾನು ಬೇಗುಸರಾಯ್ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ನವಾಡದಿಂದಲೇ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಇದು ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ ಎಂದು ಹೇಳಲಾಗಿದೆ. ಬೇಗುಸರಾಯ್ ಈ ಕ್ಷೇತ್ರದಲ್ಲಿ ಎನ್ ಡಿಎ ಎಲ್ ಜೆಪಿಯ ಚಂದನ್ ಕುಮಾರ್ ರನ್ನು ಕಣಕ್ಕಿಳಿಸಿದೆ.
ಬೇಗುಸರಾಯ್ ಕ್ಷೇತ್ರದಿಂದ ಕನ್ಹಯ್ಯ ಕುಮಾರ್ ಸಿಪಿಐ ಟಿಕೆಟ್ ನಲ್ಲಿ ಸ್ಪರ್ಧಿಸಲಿದ್ದು, ಗಿರಿರಾಜ್ ಸಿಂಗ್ ರಿಗೆ ಪ್ರಬಲ ಪ್ರತಿಸ್ಪರ್ಧಿ ಎಂದೇ ಹೇಳಲಾಗುತ್ತಿದೆ.