ಇಂಪಾಲ, ಏ 28 (DaijiworldNews/HR): ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಚುರಾಚಂದ್ಪುರ ಜಿಲ್ಲೆಯ ನ್ಯೂ ಲಮ್ಕಾದಲ್ಲಿ ಭಾಗವಹಿಸಲಿದ್ದ ಕಾರ್ಯಕ್ರಮವೊಂದರ ಸ್ಥಳವನ್ನು ಗುರುವಾರ ರಾತ್ರಿ ಗುಂಪೊಂದು ಧ್ವಂಸಗೊಳಿಸಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಬಿರೇನ್ ಸಿಂಗ್ ಉದ್ಘಾಟಿಸಲಿರುವ ನ್ಯೂ ಲಮ್ಕಾದಲ್ಲಿರುವ ಪಿಟಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಹೊಸದಾಗಿ ಸ್ಥಾಪಿಸಲಾದ ತೆರೆದ ಜಿಮ್ ಅನ್ನು ಗುಂಪು ಭಾಗಶಃ ಸುಟ್ಟು ಹಾಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಸ್ಥಳೀಯ ಪೊಲೀಸರು ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ದೊಡ್ಡ ಪ್ರಮಾಣದ ಹಾನಿಯಾಗುವ ಮೊದಲು ಗುಂಪನ್ನು ಚದುರಿಸಿದರು ಆದರೆ ನೂರಾರು ಸುಡುವ ಕುರ್ಚಿಗಳು ಕಂಡು ಬಂದಿವೆ.
ತೆರೆದ ಜಿಮ್ನ ಉದ್ಘಾಟನೆ ಜೊತೆಗೆ, ಸದ್ಭಾವನಾ ಮಂಟಪದಲ್ಲಿ ಸ್ಥಳೀಯರು ಆಯೋಜಿಸಿರುವ ಮತ್ತೊಂದು ಸಮಾರಂಭದಲ್ಲಿ ಬಿರೇನ್ ಭಾಗವಹಿಸಲಿದ್ದರು. ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯು ಚುರಚಂದಪುರವನ್ನು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಸಂಪೂರ್ಣ ಬಂದ್ ಮಾಡಲು ಕರೆ ನೀಡಿದ್ದರಿಂದ ಗುಂಪು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.