ಗೋವಾ, (DaijiworldNews/KK):ಗೋವಾದಲ್ಲಿ ವಿದೇಶಿ ಪ್ರಜೆಗಳಿಗೆ ಡ್ರಗ್ಸ್ ಪೂರೈಕೆಯಲ್ಲಿ ತೊಡಗಿದ್ದ ಇಬ್ಬರು ರಷ್ಯ ದೇಶದ ಪ್ರಜೆಗಳನ್ನು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೂ ಬಂಧಿಸಿದೆ.
1980ರ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಈಜುಗಾರ್ತಿ, ಮಾಜಿ ಪೊಲೀಸ್ ಮತ್ತು ಒಬ್ಬ ಭಾರತೀಯನನ್ನು ಬಂಧಿಸಿ ವಿವಿಧ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಷ್ಯಾದ ಡ್ರಗ್ ದಂಧೆ ಗೋವಾದ ಅರಂಬೋಲ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಸುಳಿವು ಆಧರಿಸಿ, ತನಿಖೆಯನ್ನು ಪ್ರಾರಂಭಿಸಲಾಯಿತು.
ಎಸ್ ವರ್ಗನೋವಾ ಎಂಬ ರಷ್ಯಾದ ಮಹಿಳೆ ವಿದೇಶಿ ಪ್ರಜೆಗಳಿಗೆ ಡ್ರಗ್ಸ್ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದು, ತನಿಖೆಯ ಸಮಯದಲ್ಲಿ, ಆಕಾಶ್ ಎಂಬ ಸ್ಥಳೀಯ ವ್ಯಕ್ತಿಯನ್ನು ಬಂಧಿಸಿ ಪೂರಕ ಮಾಹಿತಿಯನ್ನು ಸಹ ನಾವು ಸ್ವೀಕರಿಸಿದ್ದೇವೆ ಎಂದು ಎನ್ಸಿಬಿ ಅಧಿಕಾರಿ ತಿಳಿಸಿದ್ದಾರೆ.
ಹೆಚ್ಚಿನ ತನಿಖೆಯ ಸಮಯದಲ್ಲಿ, ಆಕಾಶ್ ದೊಡ್ಡ ನೆಟ್ವರ್ಕ್ನ ಭಾಗವಾಗಿದ್ದಾನೆ ಮತ್ತು ಅವನು ಕಾರ್ಟೆಲ್ನ ಕಿಂಗ್ಪಿನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಷ್ಯಾದ ವ್ಯಕ್ತಿಯ ನಿರ್ದೇಶನಗಳ ಮೇಲೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.