ಪಂಜಾಬ್, ಏ 30 (DaijiworldNews/HR): ಲುಧಿಯಾನದ ಗಿಯಾಸ್ಪುರ ಪ್ರದೇಶದಲ್ಲಿ ಅನಿಲ ಸೋರಿಕೆ ಘಟನೆಯಿಂದಾಗಿ 9 ಜನರು ಸಾವನ್ನಪ್ಪಿದ್ದು, ಇತರ 10 ಜನರು ಅಸ್ವಸ್ಥರಾಗಿರುವ ಘಟನೆ ವರದಿಯಾಗಿದೆ.
ಎನ್ಡಿಆರ್ಎಫ್ ತಂಡಗಳು ಕಾರ್ಖಾನೆಗೆ ಧಾವಿಸಿದ್ದು, ವೈದ್ಯರ ತಂಡ ಮತ್ತು ಅಗ್ನಿಶಾಮಕ ದಳವೂ ಸ್ಥಳಕ್ಕೆ ತಲುಪಿದೆ. ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರಗತಿಯಲ್ಲಿದೆ.
ಪೊಲೀಸ್ ಅಧಿಕಾರಿಗಳು ಗಸ್ತು ತಿರುಗುತ್ತಿದ್ದು, ಮುಖವಾಡಗಳನ್ನು ಧರಿಸಿ ಮತ್ತು ಸುತ್ತುವರಿದ ಪ್ರದೇಶದಿಂದ ಸ್ಥಳೀಯರನ್ನು ಹೊರಗುಳಿಯುವಂತೆ ತಿಳಿಸಿದ್ದಾರೆ.