ಪಾಟ್ನಾ, ಏ 01 (DaijiworldNews/HR): ಬಿಹಾರದ ಸಿವಾನ್ನಲ್ಲಿ 40 ವರ್ಷದ ವ್ಯಕ್ತಿಯೊಬ್ಬ 11 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದು, ಆತನನ್ನು ಪೋಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮೀಪುರ ಗ್ರಾಮದ ನಿವಾಸಿ ಮಹೇಂದ್ರ ಪಾಂಡೆ (40) ಬಂಧಿತ ಆರೋಪಿ.
ಆರೋಪಿ ಮಹೇಂದ್ರ ಪಾಂಡೆ ಬಾಲಕಿಯ ತಾಯಿಗೆ 2 ಲಕ್ಷ ರೂ. ಸಾಲ ನೀಡಿದ್ದು, ಸಾಲವನ್ನು ಆಕೆ ವಾಪಾಸ್ ಕೊಡದ ಕಾರಣಕ್ಕೆ ಮಹೇಂದ್ರ ಮಹಿಳೆಯ ಅಪ್ರಾಪ್ತ ಮಗಳನ್ನು ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇನ್ನು ಮೈರ್ವಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಈ ಬಗ್ಗೆ ದೂರು ನೀಡಿದ್ದು, ಆರೋಪಿಯನ್ನು ಪೋಕ್ಸೊ ಕಾಯಿದೆಯಡಿಯಲ್ಲಿ ಬಂಧಿಸಲಾಗಿದೆ.
ಬಂಧನದ ಬಳಿಕ ಬಾಲಕಿ ಹಾಗೂ ಆರೋಪಿ ತಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿವಾಹವಾಗಿದ್ದಾರೆ ಎಂದು ಪೊಲೀಸರ ಮುಂದೆ ತಪ್ಪೊಪ್ಪೊಕೊಂಡಿದ್ದಾರೆ.