ನವದೆಹಲಿ, ಮೇ 1 (DaijiworldNews/MS): ಕೇಂದ್ರ ಸರ್ಕಾರ 14 ಮೊಬೈಲ್ ಮೆಸೇಂಜರ್ ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ.
ಭಯೋತ್ಪಾದಕ ಚಟುವಟಿಕೆಗಳ ಮೇಲೆ ದೊಡ್ಡ ಪ್ರಚಾರವಾಗಿ ಶಿಸ್ತುಕ್ರಮದ ರೂಪದಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದ್ದು ಭಯೋತ್ಪಾದಕರು ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಬೆಂಬಲಿಗರು ಮತ್ತು ಓವರ್ ಗ್ರೌಂಡ್ ವರ್ಕರ್ಸ್ (OGW) ಜೊತೆ ಸಂವಹನ ನಡೆಸಲು ಮತ್ತು ಪಾಕಿಸ್ತಾನದಿಂದ ಸೂಚನೆಗಳನ್ನು ಸ್ವೀಕರಿಸಲು ಬಳಸುತ್ತಿದ್ದ 14 ಮೊಬೈಲ್ ಸಂದೇಶ ಅಪ್ಲಿಕೇಶನ್ಗಳನ್ನು ಕೇಂದ್ರವು ನಿಷೇಧಿಸಿದೆ.
ರಕ್ಷಣಾ ಮತ್ತು ಜಾಗೃತ ಮತ್ತು ಗುಪ್ರಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಕ್ರಿಪ್ವೈಸರ್, ಎನಿಗ್ಮಾ, ಸೇಫ್ಸ್ವಿಸ್, wickrme, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್, ನಂಡ್ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್ ಲೈನ್, ಝಾಂಗಿ ಮತ್ತು ಥ್ರೀಮಾ ಆಪ್ ಗಳನ್ನು ನಿಷೇಧಿಸಲಾಗಿದೆ.
ದೇಶದ ಭದ್ರತೆಗೆ ಧಕ್ಕೆ ತರುವ ಮೊಬೈಲ್ ಅಪ್ಲಿಕೇಷನ್ ಗಳ ಮೇಲೆ ಕೇಂದ್ರ ಕಡಿವಾಣ ಹಾಕುತ್ತಿರುವುದು ಹೊಸದೇನಲ್ಲ, ಈ ಹಿಂದೆ ಚೀನಾದ ಹಲವು ಆಪ್ ಗಳನ್ನು ಸರ್ಕಾರ ನಿಷೇಧಿಸಿದೆ.