ಬೆಂಗಳೂರು, ಮೇ 1 (DaijiworldNews/MS): ಬಿಪಿಎಲ್ ಕಾರ್ಡು ಇರುವ ಪ್ರತೀ ಕುಟುಂಬಕ್ಕೆ ಪೋಷಣಾ ಯೋಜನೆ ಅಡಿ ನಿತ್ಯ ಅರ್ಧ ಲೀಟರ್ ಹಾಲನ್ನು ವಿತರಿಸುತ್ತೇವೆಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ನಗರ ಪ್ರದೇಶದಲ್ಲಿ 5 ಲಕ್ಷ ಹಾಗೂ ಗ್ರಾಮೀಣ ಪ್ರದೇಶದಲ್ಲಿ 10 ಲಕ್ಷ ಮನೆ ನಿರ್ಮಿಸುತ್ತೇವೆ. ಇದಲ್ಲದೆ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 5 ಕೆಜಿ ಅಕ್ಕಿ ಜತೆಗೆ 5 ಕೆಜಿ ಸಿರಿಧಾನ್ಯವನ್ನೂ ವಿತರಿಸುತ್ತೇವೆ. ವರ್ಷದ ಪ್ರಮುಖ 3 ಹಬ್ಬಗಳಿಗೆ ಸಿಲಿಂಡರ್ ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಜನರ ಹಿತದೃಷ್ಟಿಯನ್ನಿಕೊಟ್ಟುಕೊಂಡು ಪ್ರಣಾಳಿಕೆ ತಯಾರಿಸಿದ್ದೇವೆ. ಪ್ರಣಾಳಿಕೆ ರಾಜ್ಯ ಸರ್ಕಾರ ನಡೆಯುವ ದಿಕ್ಕನ್ನು ತೋರಿಸುತ್ತದೆ. ಸುಮಾರು 2 ವರ್ಷ ಕೊರೊನಾದಿಂದ ಆರ್ಥಿಕ ಕುಸಿತ ಆಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.