ಬೆಂಗಳೂರು, ಮೇ 1 (DaijiworldNews/MS): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಉಳಿದಿರುವುದು 9 ದಿನಗಳು ಮಾತ್ರ. ಸಂಪೂರ್ಣ ಮತದಾನದ ಉದ್ದೇಶ ಈಡೇರಿಕೆಗೆ ವೃದ್ಧರು ಮತ್ತು ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನದ ಅವಕಾಶ ಕಲ್ಪಿಸಲಾಗಿದೆ.ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು 2 ದಿನದಲ್ಲಿ ರಾಜ್ಯಾದ್ಯಂತ 31,119 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಸೋಮವಾರ 1270 ತಂಡಗಳು ವಿವಿಧ ಕಡೆ ಸಂಚರಿಸಲಿದ್ದು, ಅಂದಾಜು 20000 ಮಂದಿ ಮತದಾನ ಮಾಡುವ ನಿರೀಕ್ಷೆಯಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಕಲಚೇತನರು ಮತ್ತು 80ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ ಮಾಡುವ ವ್ಯವಸ್ಥೆಯು ಏ.29ರಿಂದ ಆರಂಭವಾಗಿದ್ದು ಮೇ 6ಕ್ಕೆ ಕೊನೆಗೊಳ್ಳಲಿದೆ.