ಕನಕಗಿರಿ, ಮೇ 02 (DaijiworldNews/HR): ಜೋರಾಗಿ ಸುರಿದ ಮಳೆಯಿಂದಾಗಿ ಮನೆ ಕುಸಿದು ಬಿದ್ದಿದ್ದರಿಂದ ನವಜಾತ ಶಿಶು ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಜೀರಾಳ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕನಕಮ್ಮ ಎಂಬುವವರು ಇತ್ತೀಚಿಗೆ ಮಗುವಿಗೆ ಜನ್ಮ ನೀಡಿದ್ದು, ಮನೆಯ ಒಳಗಡೆ ಮಲಗಿದ್ದ ಕನಕಮ್ಮನ ತಾಯಿ ಫಕೀರಮ್ಮ ತಿಮ್ಮಣ್ಣ ಬೋವಿ (60) ಸ್ಥಳದಲ್ಲಿಯೇ ಮೃತಪಟಿದ್ದು ಶಿಶು ಆಸ್ಪತ್ರೆ ಕರೆದುಕೊಂಡು ಹೋಗುವಾಗ ರಸ್ತೆಯಲ್ಲಿ ಮೃತ ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಕನಕಮ್ಮನ ಕಾಲು ಮುರಿದಿದ್ದು ಆಸ್ಪತ್ರೆ ಗೆ ದಾಖಲು ಮಾಡಲಾಗಿದ್ದು, ಕನಕಮ್ಮನ ಪತಿ ಮನೆಯ ಹೊರಗಡೆ ಮಲಗಿದ್ದರಿಂದ ಯಾವುದೇ ಸಮಸ್ಯೆಯಾಗಿಲ್ಲ.
ಮಂಗಳವಾರ ಬೀಸಿದ ಜೋರಾದ ಗಾಳಿಯಿಂದಾಗಿ ಮನೆಯ ಚಾವಣಿಗೆ ಹಾಕಲಾಗಿದ್ದ ಸಿಮೆಂಟ್ ಸೀಟುಗಳೊಂದಿಗೆ ಮನೆ ಕುಸಿದು ಬಿದ್ದಿದೆ.