ನವದೆಹಲಿ, ಮೇ 02 (DaijiworldNews/HR): ಯುದ್ಧಗ್ರಸ್ಥ ಸೂಡಾನ್ನಿಂದ ಭಾರತೀಯರನ್ನು ಕರೆತರುವ ಕೇಂದ್ರ ಸರಕಾರದ ಆಪರೇಶನ್ ಕಾವೇರಿಯಲ್ಲಿ ಹೊಸತಾಗಿ 186 ಮಂದಿಯನ್ನು ಸುರಕ್ಷಿತವಾಗಿ ಕೊಚ್ಚಿಗೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈವರೆಗೆ ಸುರಕ್ಷಿತವಾಗಿ ತಲುಪಿದ ಭಾರತೀಯರ ಸಂಖ್ಯೆ 2,140ಕ್ಕೆ ಏರಿಕೆಯಾಗಿದ್ದು, ಇದೇ ವೇಳೆ 17ನೇ ತಂಡದಲ್ಲಿ 135 ಮಂದಿಯ ತಂಡ ಜೆಡ್ಡಾದಿಂದ ಭಾರತದತ್ತ ಪ್ರಯಾಣ ಬೆಳೆಸಿದೆ ಎಂದಿದ್ದಾರೆ.
ಇನ್ನು ಪರೇಶನ್ ಕಾವೇರಿಯ ಅನ್ವಯ ಸೌದಿ ಅರೇಬಿಯಾದಿಂದ ಭಾರತೀಯರನ್ನು ಕರೆತರಲು ಹೆಚ್ಚುವರಿಯಾಗಿ ವಿಮಾನಗಳ ಸಂಚಾರ ನಡೆಸಲು ಸ್ಪೈಸ್ಜೆಟ್ ಮುಂದಾಗಿದೆ.