ಯಲಹಂಕ,ಮೇ 03 (DaijiworldNews/MS): ಮತದಾನಕ್ಕೆ ಕೌಂಟ್ಡೌನ್ ಶುರುವಾಗಿರಬೇಕಾದರೆ, ಹೇಗಾದರೂ ಗೆಲ್ಲಲೇಬೇಕೆಂಬ ಹುಮ್ಮಸ್ಸಿನಿಂದ ಮತದಾರರ ಸಿಂಪತಿ ಗಿಟ್ಟಿಸಿಕೊಳ್ಳಲು ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡ ತನ್ನನ್ನು ತಾನೇ ಕಿಡ್ನಾಪ್ ಮಾಡುವ ಸ್ಕೆಚ್ ಹಾಕಿದ್ದು, ಈ ಕುರಿತ ಸ್ಫೋಟಕ ವೀಡಿಯೊ ಲೀಕ್ ಆಗಿದೆ.
ಈ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದ್ದು, 17 ನಿಮಿಷದ ಈ ವಿಡಿಯೋದಲ್ಲಿ ಕಿಡ್ನಾಪ್ ತಂತ್ರಗಳ ಬಗ್ಗೆ ಮಾತುಕತೆ ನಡೆಸಲಾಗಿದೆ.
ತಮ್ಮನ್ನು ಅಪಹರಣ ಮಾಡಿಸಿ ಆ ಬಳಿಕ ಅದನ್ನು ಬಿಜೆಪಿ ಅಭ್ಯರ್ಥಿ ಎಸ್. ಆರ್ ವಿಶ್ವನಾಥ್ ತಲೆಗೆ ಕಟ್ಟುವ ಪ್ಲ್ಯಾನ್ ಮಾಡಿದ್ದಾರೆ. ಮೇ 7ಕ್ಕೆ ಕ್ಷೇತ್ರದಲ್ಲಿ ಜೆಡಿಎಸ್ ಸಮಾವೇಶವಿದ್ದು, 5 ಅಥವಾ 6ಕ್ಕೆ ಕಿಡ್ನಾಪ್ ಮಾಡಿಸಿಕೊಂಡು ಜನರಿಂದ ಅನುಕಂಪ ಗಿಟ್ಟಿಸಿಕೊಳ್ಳುವುದು ಈ ಸ್ಕೆಚ್ನ ಹಿಂದಿನ ಉದ್ದೇಶವಾಗಿರುವುದು ಬಯಲಾಗಿದೆ..
ಈ ವಿಡಿಯೋ ಬಗ್ಗೆ ಮಾಹಿತಿ ಆಧಾರಿಸಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್, ವಿಡಿಯೋ ಆಧರಿಸಿ ದೂರು ನೀಡಲು ಮುಂದಾಗಿದ್ದಾರೆ.