ನವದೆಹಲಿ, ಮಾ26(SS): ಏಪ್ರಿಲ್ 5ರಂದು ಬಿಡುಗಡೆಗೆ ಸಿದ್ಧವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಚರಿತ್ರೆ ಆಧಾರಿತ ಪಿಎಂ ನರೇಂದ್ರ ಮೋದಿ ಚಲನಚಿತ್ರವು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಪೂರ್ವ ದೆಹಲಿಯ ರಿಟರ್ನಿಂಗ್ ಅಧಿಕಾರಿ ಮಹೇಶ್, ಪಿಎಂ ನರೇಂದ್ರ ಮೋದಿ ಚಿತ್ರ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಪಿಎಂ ನರೇಂದ್ರ ಮೋದಿ ಚಿತ್ರದ ನಿರ್ಮಾಣ ಸಂಸ್ಥೆ ಮತ್ತು ಸಂಗೀತ ನೀಡಿದ ಸಂಸ್ಥೆಗೆ ನೋಟಿಸ್ ನೀಡಿದ್ದು ಮಾತ್ರವಲ್ಲದೆ, ಈ ಚಿತ್ರದ ಬಗೆಗಿನ ಜಾಹೀರಾತು ಪ್ರಕಟಿಸಿದ ಎರಡು ಪ್ರಮುಖ ಪತ್ರಿಕೆಗಳಿಗೂ ನೋಟಿಸ್ ನೀಡಲಾಗಿದೆ.
ಮಾರ್ಚ್ 30ರವರೆಗೂ ಆಯೋಗ ನೀಡಿರುವ ನೋಟಿಸ್ಗೆ ಉತ್ತರಿಸಲು ಕಾಲಾವಕಾಶ ನೀಡಲಾಗಿದೆ ಎಂದು ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.