ಬೆಂಗಳೂರು,ಮೇ6(DaijiworldNews/KH):ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಈ ವರ್ಷದ ಪದವಿಪೂರ್ವ ನೀಟ್ ಯು ಜಿ 2023ರ ಪರೀಕ್ಷೆಗಾಗಿ ಈ ವರ್ಷದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು ನಾಳೆ, ಮೇ 7, 2023 ರಂದು ನಡೆಯಲಿದೆ .
20 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಭಾರತದ ಏಕೈಕ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಲಿದ್ದು, ನೀಟ್ 13 ಭಾಷೆಗಳಲ್ಲಿ ನಡೆಸಲಾಗುತ್ತದೆ.
ದೇಶದಾದ್ಯಂತ 499 ಸ್ಥಳಗಳಲ್ಲಿ ಲಿಖಿತ ರೂಪದಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ಅಲ್ಲದೇ ನೀಟ್ ಪರೀಕ್ಷೆಯು ಮೇ 7 ರಂದು ಮಧ್ಯಾಹ್ನ 2 ರಿಂದ ಸಂಜೆ 5:20 ರವರೆಗೆ ನಡೆಯಲಿದ್ದು, ಪರೀಕ್ಷೆಯ ಅವಧಿಯು ಮೂರು ಗಂಟೆ ಇಪ್ಪತ್ತು ನಿಮಿಷಗಳು ಇದರಲ್ಲಿ ಅಭ್ಯರ್ಥಿಗಳು ಒಟ್ಟು 720 ಅಂಕಗಳನ್ನು ಹೊಂದಿರುವ 180 ಪ್ರಶ್ನೆಗಳನ್ನು ಪ್ರಯತ್ನಿಸಬೇಕು.
NEET UG 2023 ಗಾಗಿ ಪ್ರವೇಶ ಕಾರ್ಡ್ಗಳನ್ನು neet.nta.nic.in ನಿಂದ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಡೌನ್ಲೋಡ್ ಮಾಡಬಹುದು ಹಾಗೂ ಪ್ರವೇಶ ಕಾರ್ಡ್ಗಳನ್ನು ಸುಲಭವಾಗಿ ಪಡೆಯಲು ಅಭ್ಯರ್ಥಿಗಳು ತಮ್ಮ ಜನ್ಮ ದಿನಾಂಕ ಮತ್ತು ಅಪ್ಲಿಕೇಶನ್ ಸಂಖ್ಯೆಯಂತಹ ಲಾಗಿನ್ ವಿವರಗಳನ್ನು ನಮೂದಿಸಬಹುದು.
ನೀಟ್ ಯುಜಿ 2023 ಪರೀಕ್ಷೆ; ಸಮಯ, ಪರೀಕ್ಷೆಯ ಮಾದರಿ, ಡ್ರೆಸ್ ಕೋಡ್ ಇತರ ಪ್ರಮುಖ ಸೂಚನೆಗಳನ್ನು ಪರಿಶೀಲಿಸಬೇಕು.