ನವದೆಹಲಿ,ಮಾ26(AZM):ಪ್ರಸಿದ್ಧ ಚಿತ್ರ ನಟಿ,ಸಮಾಜವಾದಿ ಪಕ್ಷದ ಮಾಜಿನಾಯಕಿ, ಜಯಪ್ರದ ಅವರು ಇಂದು ಬಿಜೆಪಿ ಸೇರಿದ್ದಾರೆ.
ಇಂದು ಜಯಪ್ರದ ಅವರು ಬಿಜೆಪಿ ಸೇರಿದ ಹಿನ್ನಲೆ ಉತ್ತರ ಪ್ರದೇಶದ ರಾಮಪುರದಿಂದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ವಿರುದ್ಧ ಅವರು ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. 55 ವರ್ಷ ವಯಸ್ಸಿನ ಜಯಪ್ರದ ಅವರು ಸಮಾಜವಾದಿ ಪಕ್ಷದ ಟಿಕೆಟ್ ನಿಂದಲೇ ಎರಡು ಬಾರಿ ರಾಂಪುರದ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದ್ದರು. ಆದರೆ, 2010ರಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಜತೆಗಿನ ಕಿತ್ತಾಟದಿಂದಾಗಿ ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್ ಜತೆಯಲ್ಲಿಯೇ ಜಯಪ್ರದಾ ಅವರನ್ನು ಎಸ್ ಪಿ ಉಚ್ಛಾಟಿಸಿತ್ತು.
ಇದಾದ ಬಳಿಕ ರಾಷ್ಟ್ರೀಯ ಲೋಕ್ ದಳ ಸೇರಿದ ಜಯಪ್ರದ, 2014ರಲ್ಲಿ ಬಿಜನೋರ್ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.