ಕೋಲ್ಕತ್ತಾ,ಮೇ8(Daijiworld News/KH):ಸೋಮವಾರ ನಡೆದ ಈಶಾನ್ಯ ರಾಜ್ಯವನ್ನು ಬೆಚ್ಚಿಬೀಳಿಸಿದ ಹಿಂಸಾಚಾರದ ಬಗ್ಗೆ ಕೇಂದ್ರ ಮತ್ತು ಮಣಿಪುರದ ಬಿಜೆಪಿ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಘಟನೆ ಬಂಗಾಳದಲ್ಲಿ ಏನಾದರೂ ಸಂಭವಿಸಿದ್ದಾರೆ ನಮ್ಮ ಮಾನಹಾನಿ ಮಾಡಲು ನೂರಾರು ಕೇಂದ್ರ ತಂಡಗಳನ್ನು ಇಲ್ಲಿಗೆ ಕಳುಹಿಸಲಾಗುತ್ತಿತ್ತು ಅಲ್ಲದೇ ಮಣಿಪುರ ಬಿಜೆಪಿ ಆಡಳಿತದ ರಾಜ್ಯವಾಗಿರುವುದರಿಂದ ಏನೂ ಮಾಡಲಾಗುತ್ತಿಲ್ಲ. ಆದರೆ ಜನರು ಅಂಕಿಅಂಶಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ” ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿದ್ದಾಗ ಮತ್ತು ಸಾಮಾನ್ಯ ಹಿಂಸಾಚಾರದಲ್ಲಿ ಎಷ್ಟೋ ಜನರು ಸಾವನ್ನಪ್ಪಿದ್ದಾರೆಂದು ನಮಗೆ ತಿಳಿದಿಲ್ಲ ಆದರೆ ರಾಜ್ಯ ಸರಕಾರ ಅಂಕಿ ಅಂಶಗಳನ್ನು ಹೇಳುತ್ತಿಲ್ಲ. ಹೀಗಾಗಿ 60-70 ಸಾವುಗಳಾಗಿದೆ ಎಂದು ತಿಳಿದುಕೊಂಡೆ ಎಂದರು.
ಮೈತಿ ಸಮುದಾಯದ ಸದಸ್ಯರು ಮತ್ತು ಬುಡಕಟ್ಟು ಜನಾಂಗದವರ ನಡುವೆ ಘರ್ಷಣೆ ನಡೆದ ನಂತರ ಮಣಿಪುರದಲ್ಲಿ ಪರಿಸ್ಥಿತಿಯ ಬಗ್ಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ.