ಬೆಂಗಳೂರು, ಮೇ 09 (DaijiworldNews/MS): ಚುನಾವಣೆಗೆ ಇನ್ನು ಕೆಲವೇ ಗಂಟೆಗಳಷ್ಟೇ ಬಾಕಿಯಿದ್ದು ಹೀಗಾಗಿ ಇಂದು ಸಂಜೆ ರಾಜ್ಯಾದ್ಯಾಂತ ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿವೆ.
ಸಂಗ್ರಹ ಚಿತ್ರ
ಪ್ರತಿ ಮತಗಟ್ಟೆಗೆ, ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಸೇರಿ ಒಟ್ಟು ಐದು ಮಂದಿ ಸಿಬ್ಬಂದಿ ಇರುತ್ತಾರೆ. ಬೆಳಗ್ಗೆ ರಾಜಕೀಯ ಪಕ್ಷಗಳ ಅಭ್ಯರ್ಥಿ ಪ್ರತಿನಿಧಿಗಳ ಸಮ್ಮುಖ ಆಯಾ ಮಸ್ಟರಿಂಗ್ ಕೇಂದ್ರದಲ್ಲಿರುವ ಭದ್ರತಾ ಕೊಠಡಿ ತೆರೆಯಲಾಗುತ್ತದೆ. ಅಲ್ಲಿಂದ ಇವಿಎಂಗಳನ್ನು ಮಸ್ಟರಿಂಗ್ ಕೇಂದ್ರದ ನಿಗದಿತ ಕೊಠಡಿಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲಾಗುತ್ತದೆ. ಮಧ್ಯಾಹ್ನದ ಹೊತ್ತಿಗೆ ಇದು ಪೂರ್ಣಗೊಂಡು ಊಟದ ಬಳಿಕ ಮತಗಟ್ಟೆಗೆ ತೆರಳಲಿದ್ದಾರೆ.ತೆರಳಿದವರು ಮತಗಟ್ಟೆ ತಲುಪಿದ್ದಾರೆಯೇ ಎಂಬುವುದನ್ನು ಸೆಕ್ಟರ್ ಅಧಿಕಾರಿಗಳು ಖಚಿತಪಡಿಸಿಕೊಳ್ಳುತ್ತಾರೆ.
ಮತದಾನದ ದಿನ ಬೆಳಗ್ಗೆ 5.30ಕ್ಕೆ ಅಣಕು ಮತದಾನ ನಡೆಯುತ್ತದೆ. ಆ ಬಳಿಕ ಸರಿಯಾಗಿ 7 ಗಂಟೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.