ನವದೆಹಲಿ, ಮೇ 11 (DaijiworldNews/MS): ಜಗತ್ತಿನಲ್ಲಿ ನಡೆದಿರುವ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಭಾರತದ್ದೇ ಅಗ್ರ ಸ್ಥಾನ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ಅಧ್ಯಯನ ವರದಿ ಹೇಳಿದೆ.
ಹೆರಿಗೆ ಅವಧಿಯಲ್ಲಿ ತಾಯಿಯ ಸಾವು, ಶಿಶುಗಳ ಮರಣ , ಗರ್ಭಾವಸ್ಥೆಯಲ್ಲಿಯೇ ಶಿಶುಗಳ ಸಾವು ಪ್ರಕರಣದಲ್ಲಿ ಭಾರತವು ಜಗತ್ತಿನ ಹತ್ತು ರಾಷ್ಟ್ರಗಳ ಪೈಕಿ ಮೊದಲ ಸ್ಥಾನದಲ್ಲಿ ನಿಂತಿದೆ.
2020ಕ್ಕೆ ಸಂಬಂಧಿಸಿದಂತೆ 7,88,000 ಹೆರಿಗೆ ಅವಧಿಯಲ್ಲಿ ತಾಯಿಯ ಸಾವು ನವಜಾತ ಶಿಶುಗಳ ಸಾವು ಪ್ರಕರಣ ದಾಖಲಾಗಿದೆ. ಜಗತ್ತಿನಲ್ಲಿ 45 ಲಕ್ಷ ಇಂಥ ಕೇಸುಗಳು ದೃಡಪಟ್ಟಿದೆ.
ಭಾರತ ಮಾತ್ರವಲ್ಲದೇ ನೈಜೀರಿಯಾ, ಪಾಕಿಸ್ತಾನ, ಕಾಂಗೊ ಗಣರಾಜ್ಯ, ಬಾಂಗ್ಲಾದೇಶ ಮತ್ತು ಚೀನಾ ಈ ಪಟ್ಟಿಯಲ್ಲಿವೆ. ಹೆರಿಗೆ ಅವಧಿಯಲ್ಲಿ ತಾಯಿಯ ಸಾವು, ಶಿಶುಗಳ ಮರಣ ನಿಯಂತ್ರಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಕಳೆದ ದಶಕದ ಅವಧಿಯಲ್ಲಿ ನಿಧಾನಗತಿಯಲ್ಲಿತ್ತು ಎಂದು ವರದಿಯಲ್ಲಿ ವಿಷಾದ ವ್ಯಕ್ತಪಡಿಸಲಾಗಿದೆ