ಮುಂಬೈ,ಮಾ.26(AZM):ಬಾಲಿವುಡ್ ನಟಿ ಉರ್ಮಿಳಾ ರಾಜಕೀಯಕ್ಕೆ ತಿರುಗಿದ್ದಾರೆಯೇ? ಇಂತಹ ಒಂದು ಮಾತು ಇದೀಗ ಕೇಳಿ ಬರುತ್ತಿದ್ದು, ಉರ್ಮಿಳಾ ಲೋಕಾಸಭಾ ಚುನಾವಣೆಯಲ್ಲಿ ಉತ್ತರ ಮುಂಬೈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಸೂಮ್ ಚಿತ್ರದಿಂದ ಬಾಲನಟಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಉರ್ಮಿಳಾ ಬಿಜೆಪಿ ಅಭ್ಯರ್ಥಿ ಗೋಪಾಲ್ಶೆಟ್ಟಿಗೆ ಪ್ರತಿಸ್ಪರ್ಧಿಯಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.ಇನ್ನೆರಡು ಮೂರು ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅವರು ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.ಕಾಂಗ್ರೆಸ್ ಮುಖಂಡರು ಈಗಾಗಲೇ ಊರ್ಮಿಳಾರನ್ನು ಉತ್ತರ ಮುಂಬೈನಿಂದ ಸ್ಪರ್ಧೆಗೆ ಇಳಿಸಬೇಕೆಂದು ಅಂದಾಜಿಸಿದ್ದು ಇನ್ನೆರಡು ದಿನಗಳಲ್ಲಿ ಪೂರ್ಣ ಚಿತ್ರಣ ಹೊರಬೀಳಲಿದೆ ಎನ್ನಲಾಗಿದೆ.
.ಉರ್ಮಿಳಾರವರು ಸಿನಿಮಾ ರಂಗದಲ್ಲಿ ತಮ್ಮ ಅಭಿನಯದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು, ಇದೀಗ ರಾಜಕೀಯ ಪರೀಕ್ಷೆಯಲ್ಲಿ ಅವರ ಅದೃಷ್ಟ ಹೇಗಿದೆ ಎಂದು ಕಾದುನೋಡಬೇಕಿದೆ.