ಬೆಂಗಳೂರು, ಮೇ 12 (DaijiworldNews/MS): ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯದಲ್ಲಿ ಎರಡು ದಿನ ಮದ್ಯದಂಗಡಿಗಳು ಬಂದ್ ಆಗಿದ್ದಕ್ಕೆ ಸರ್ಕಾರದ ಬೊಕ್ಕಸಕ್ಕೆ ಅಂದಾಜು 150 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಪ್ರತಿ ದಿನ ಸರ್ಕಾರಕ್ಕೆ ಅಬಕಾರಿ ಇಲಾಖೆಗೆ ಮದ್ಯಮಾರಾಟದಿಂದ ಪ್ರತಿದಿನ 60-70 ಕೋಟಿ ರೂ ಆದಾಯ ಬರುತ್ತದೆ ಚುನಾವಣೆ ಹಿನ್ನೆಲೆಯಲ್ಲಿ ತುಸು ಹೆಚ್ಚು ಆದಾಯ ಬರುತ್ತದೆ.
ಆದರೆ ಮತದಾನ ಹಿನ್ನೆಲೆಯಲ್ಲಿ ಮೇ. 8 ರ ಸಂಜೆ ಗಂಟೆಯಿಂದ ಮೇ.11 ರ ಬೆಳಗ್ಗೆ 11ಗಂಟೆಯವರೆಗೆ ಮದ್ಯದಂಗಡಿ ಬಂದ್ ಮಾಡುವಂತೆ ಚುನಾವಣಾ ಆಯೋಗ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸುಮಾರು ಬಾರ್, ವೈನ್ ಶಾಪ್ ಸೇರಿ ಒಟ್ಟು ೧೨,೫೦೦ ಮದ್ಯದಂಗಡಿಗಳು ಬಾಗಿಲು ಹಾಕಿತ್ತು.
ಶನಿವಾರ ಮತ ಎಣಿಕೆ ನಡೆಯುವ ಹಿನ್ನೆಲೆಯಲ್ಲಿ ಮೇ. 13 ರ ಬೆಳಗ್ಗೆ 6 ಗಂಟೆಯಿಂದ ಮೇ. 14ರ ಮುಂಜಾನೆ 6 ಗಂಟೆಯವರೆಗೆ ಮದ್ಯದಂಗಡಿಗಳು ಮತ್ತೆ ಬಂದ್ ಆಗಲಿವೆ.