ನವದೆಹಲಿ,ಮೇ12(Daijiworld News/KH):ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕೀ ಬಾತ್' ರೇಡಿಯೋ 100ನೇ ಸಂಚಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಚಂಡೀಗಢದ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಸಂಸ್ಥೆಯ ವಿದ್ಯಾರ್ಥಿಗಳನ್ನು ಒಂದು ವಾರದವರೆಗೆ ಹಾಸ್ಟೆಲ್ ನಿಂದ ಹೊರಹೋಗದಂತೆ ನಿರ್ಬಂಧಿಸಿ ಶಿಕ್ಷೆ ವಿಧಿಸಿದೆ.
ಪಿಜಿಐಎಂಇಆರ್ ಅಧಿಕಾರಿ ಲಿಖಿತ, ಏಪ್ರಿಲ್ 30 ರಂದು ಎಲ್ಲಾ ವಿದ್ಯಾರ್ಥಿಗಳು 'ಮನ್ ಕೀ ಬಾತ್ 'ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಆದೇಶವನ್ನು ಹೊರಡಿಸಿದ್ದು,ಈ ಕಾರ್ಯಕ್ರಮದಲ್ಲಿ ಮೂರನೇ ವರ್ಷದ 28 ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಪ್ರಥಮ ವರ್ಷದ 8 ನರ್ಸಿಂಗ್ ವಿದ್ಯಾರ್ಥಿಗಳು ಮೋದಿ ಮನ್ ಕಿ ಬಾತ್ ಕಾರ್ಯಕ್ರಮದ ಸೆಷನ್ ಗೆ ಹಾಜರಾಗಿರಲಿಲ್ಲ, ಹೀಗಾಗಿ ವಿದ್ಯಾರ್ಥಿಗಳು ಸರಿಯಾದ ಕಾರಣ ನೀಡದೆ ಇದ್ದ ಹಿನ್ನೆಲೆ ಪಿಜಿಐಎಂಇಆರ್ ಅಧಿಕಾರಿಗಳು ಒಂದು ವಾರದವರೆಗೆ ಹಾಸ್ಟೆಲ್ ನಿಂದ ಹೊರಹೋಗದಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ.
ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಹಾಜರಾಗದಿರಲು ಯಾವುದೇ ಸೂಕ್ತ ಕಾರಣ ನೀಡದೆ ಇರುವುದರಿಂದ ಹಾಗೂ 'ಮನ್ ಕೀ ಬಾತ್' ಕಾರ್ಯಕ್ರಮದಿಂದ ದೂರ ಉಳಿದ ಹಿನ್ನೆಲೆ ಕಾಲೇಜು ಅಧಿಕಾರಿಗಳು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ” ಎಂದು ಪಿಜಿಐಎಂಇಆರ್ ಪ್ರಕಟಣೆಯಲ್ಲಿ ತಿಳಿಸಿದೆ.