ಬೆಂಗಳೂರು, ಮೇ 12 (DaijiworldNews/HR): ಮತದಾನ ಮುಗಿಯುತ್ತಿದ್ದಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ದರ ಏರಿಕೆ ಮಾಡಿ ಬಿಗ್ ಶಾಕ್ ನೀಡಿದೆ.
ಪ್ರತಿ ಯೂನಿಟ್ ಗೆ ಸರಾಸರಿ 70 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಗ್ರಾಹಕರಿಗೆ ಎಪ್ರಿಲ್ 1ರಿಂದ ಪೂರ್ವಾನ್ವಯ ಆಗಲಿದೆ. ಒಟ್ಟಾರೆ 70 ಪೈಸೆಯಲ್ಲಿ ನಿಗದಿತ ಶುಲ್ಕ ಮತ್ತು ವಿದ್ಯುತ್ ಬಳಕೆ ಶುಲ್ಕ ಎರಡೂ ಸೇರಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ತಿಳಿಸಿದೆ.
ಇನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಮನೆಗೆ ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ.