ನವದೆಹಲಿ, ಮಾ27(SS): ಭಾರತ ಈಗ ಬಾಹ್ಯಾಕಾಶದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಸಾಮರ್ಥ್ಯವನ್ನು ಪಡೆದಿದ್ದು, ಬಾಹ್ಯಾಕಾಶಲ್ಲಿ ತನ್ನ ಕ್ಷಿಪಣಿಯನ್ನು ಬಳಸಿಕೊಂಡು ಮತ್ತೊಂದು ಉಪಗ್ರಹವನ್ನು ಹೊಡೆದು ಉರುಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಳಸ್ತರದ ಕಕ್ಷೆಯಲ್ಲಿ ಸುತ್ತುವ ಉಪಗ್ರಹವೊಂದನ್ನು ಭಾರತವಿಂದು ಯಶಸ್ವಿಯಾಗಿ ಹೊಡೆದುರುಳಿಸಿದೆ. ಈ ಮೂಲಕ ಶತ್ರುದೇಶಗಳ ಉಪಗ್ರಹಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಭಾರತ ಗಳಿಸಿಕೊಂಡಿದ್ದು, 'ಸೂಪರ್ ಪವರ್'ಗಳ ಸಾಲಿಗೆ ಸೇರಿದೆ ಕೆಳಸ್ತರದ ಕಕ್ಷೆಯಲ್ಲಿ ಸುತ್ತುವ ಉಪಗ್ರಹವೊಂದನ್ನು ಭಾರತವಿಂದು ಯಶಸ್ವಿಯಾಗಿ ಹೊಡೆದುರುಳಿಸಿದೆ. ಈ ಮೂಲಕ ಶತ್ರುದೇಶಗಳ ಉಪಗ್ರಹಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಭಾರತ ಗಳಿಸಿಕೊಂಡಿದ್ದು, 'ಸೂಪರ್ ಪವರ್'ಗಳ ಸಾಲಿಗೆ ಸೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು.
300 ಕಿ.ಮೀ ದೂರದಲ್ಲಿರುವ ಉಪಗ್ರಹವನ್ನು ಭಾರತ ಇಂದು ಹೊಡೆದು ಹಾಕಿದೆ. ಒಟ್ಟು ಮೂರು ನಿಮಿಷದಲ್ಲಿ ಉಪಗ್ರಹ ಪ್ರತಿರೋಧಿ ಕ್ಷಿಪಣಿ ಪ್ರಯೋಗದ ಮಿಶನ್ ಶಕ್ತಿ ಹೆಸರಿನಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಮೂಲಕ ಅಮೆರಿಕ, ರಷ್ಯಾ, ಚೀನಾದ ಬಳಿಕ ಈ ಸಾಧನೆ ಮಾಡಿದ ನಾಲ್ಕನೇಯ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಪ್ರತಿಯೊಂದುದೇಶದಪ್ರಗತಿಯಹಾದಿಯಲ್ಲಿಅತ್ಯಂತಹೆಮ್ಮೆಯಹಾಗೂಐತಿಹಾಸಿಕಕ್ಷಣಗಳುಕೆಲವೇಸಲಮಾತ್ರಬರುತ್ತವೆ. ಅವುತಲೆಮಾರಿಗಳವರೆಗೆಮಹತ್ವದಪರಿಣಾಮಬೀರುತ್ತವೆ. ಅಂತಹಒಂದುಹೆಮ್ಮೆಯಕ್ಷಣನಮ್ಮಪಾಲಿಗಿಂದುಬಂದಿದೆ ಎಂದು ತಿಳಿಸಿದರು.
ಈ ವಿಶೇಷ ಸಾಧನೆಯ ಮೂಲಕ ಭಾರತ ವಿಶ್ವದ ಭೂಪಟದಲ್ಲಿ ಸ್ಥಾನ ಪಡೆದಿದೆ. ಈ ಸಾಧನೆಗೆ ಕಾರಣವಾದ ಎಲ್ಲಾ ವಿಜ್ಞಾನಿಗಳನ್ನು ಮೋದಿ ಅಭಿನಂದಿಸಿದರು.
ಪ್ರಯೋಗಾರ್ಥ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಶತ್ರು ರಾಷ್ಟ್ರಗಳ ಉಪಗ್ರಹವನ್ನು ಭಾರತ ಬಾಹ್ಯಾಕಾಶದಲ್ಲಿ ಹೊಡೆದು ಉರುಳಿಸುವ ಸಾಮರ್ಥ್ಯವನ್ನು ಪಡೆದಿದೆ.ಞ