ಅಮೇಥಿ,ಮಾ27(AZM):ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದ್ದು, ರಾಹುಲ್ ಗಾಂಧಿಯವರೇ ಪ್ರಧಾನಿಯಾಗಲಿದ್ದಾರೆಂದು ಸೋನಿಯಾಗಾಂಧಿಯವರು ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೀಗ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿರುವ ಪ್ರಿಯಾಂಕಾ ಗಾಂಧಿಯವರು ಅಮೇಥಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಈ ಬಾರಿ ರಾಹುಲ್ ಗಾಂಧಿಯವರು ಪ್ರಧಾನಿ ಆಗಬೇಕೆಂದು ಕಾಂಗ್ರೆಸ್ಸೇತರ ವಿಪಕ್ಷಗಳ ಮುಖಂಡರು ಮನವಿ ಮಾಡಿಕೊಂಡಿದ್ದು, ಇದೀಗ ಪ್ರಿಯಾಂಕಾ ಗಾಂಧಿಯವರು ಅದೇ ಪಟ್ಟಿಗೆ ಸೇರಿದ್ದಾರೆ. ಹಾಗೂ ರಾಹುಲ್ ಗಾಂಧಿಯವರು ಪ್ರಧಾನಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೆಹರೂ ಕುಟುಂಬದ ಸದಸ್ಯರೊಬ್ಬರು ರಾಹುಲ್ ಗಾಂಧಿ ಅವರು ಪ್ರಧಾನಿ ಆಗಲಿ ಎಂದು ಹೇಳಿದ್ದು ಇದೇ ಮೊದಲು ಎನ್ನಬಹುದು. ಸೋನಿಯಾ ಗಾಂಧಿ ಕೂಡ ಯಾವತ್ತೂ ತಮ್ಮ ಮಗ ಪ್ರಧಾನಿ ಆಗಲಿ ಎಂದು ಬಹಿರಂಗವಾಗಿ ಹೇಳಿದವರಲ್ಲ. ಆದರೆ, ಬೇರೆ ಬೇರೆ ಪಕ್ಷಗಳ ಕೆಲ ಮುಖಂಡರು ರಾಹುಲ್ ಪ್ರಧಾನಿಯಾಗಲಿ ಎಂದು ಹೇಳಿದ್ದಾರೆ. ಡಿಎಂಕೆ ಪಕ್ಷದ ಎಂ.ಕೆ. ಸ್ಟಾಲಿನ್, ಆರ್ಜೆಡಿ ಪಕ್ಷದ ತೇಜಸ್ವಿ ಯಾದವ್ ಮೊದಲಾದವರು ರಾಹುಲ್ ಪರ ಬ್ಯಾಟ್ ಬೀಸಿದ್ದರು. ದೇವೇಗೌಡ ಮತ್ತು ಕುಮಾರಸ್ವಾಮಿ ಕೂಡ ರಾಹುಲ್ ಪ್ರಧಾನಿಯಾಗಲಿ ಎಂದು ಇಚ್ಛೆ ತೋರ್ಪಡಿಸಿದ್ದರು.