ಬೆಂಗಳೂರು, ಮಾ 28(SM): ಕಳೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಂತಹ ಸಂದರ್ಭದಲ್ಲಿ 'ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಣದ ಆಮಿಷ ವೊಡ್ಡಲಾಗಿತ್ತು' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಚುನಾವಣೆಗಿಂತ ಮೊದಲು ಬಿಜೆಪಿಯವರು ಜೆಡಿಎಸ್ ಪಕ್ಷದ ಖರ್ಚಿಗಾಗಿ ಹೆಚ್ಚಿನ ಹಣವನ್ನು ನೀಡಲು ಸಿದ್ಧರಾಗಿದ್ದರು' ಎಂದು ಹೇಳಿದರು. ಅಲ್ಲದೆ ಬಿಜೆಪಿಯವರು 'ಎಚ್.ಡಿ.ಕುಮಾರಸ್ವಾಮಿಯವರನ್ನು ಮುಂಬೈಗೆ ತೆರಳುವಂತೆ ಒತ್ತಡ ಹಾಕಿದ್ದರು. ಹಾಗೂ ಹೆಚ್ ಡಿಕೆಗೆ ನೀಡಲು ಹಣವನ್ನು ಸಂಗ್ರಹಿಸಿ ಇಡಲಾಗಿತ್ತು ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ಒತ್ತಡಕ್ಕೆ ಕುಮಾರಸ್ವಾಮಿ ಮಣಿಯಲಿಲ್ಲ. ಅವರ ಬಿಜೆಪಿಯವರ ಆಮಿಷವನ್ನು ತಳ್ಳಿಹಾಕಿದ್ದಾರೆ ಎಂದರು.