ಚಿಕ್ಕಮಂಗಳೂರು,ಮಾ 29 (MSP): ಇದು ಚೌಕಿದಾರ ವರ್ಸಸ್ ಚೋರರ ನಡುವಿನ ಚುನಾವಣೆ. ಪ್ರಧಾನಿ ಮೋದಿ ದೇಶ ಕಾಯುವ ನಂಬರ್ ವನ್ ಚೌಕಿದಾರನಾದರೆ, ನಾವೆಲ್ಲ ನಮ್ಮ ನಮ್ಮ ಬೂತ್ ಕಾಯುವ ಚೌಕಿದಾರರು. ’ಭ್ರಷ್ಟಚಾರವನ್ನೇ ವ್ಯವಹಾರ ಮಾಡಿಕೊಂಡಿರುವ ಚೋರರು ’ ಎಂದು ಶಾಸಕ, ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ಅವರು ಚಿಕ್ಕಮಗಳೂರಿನ ಜಿಲ್ಲಾ ಕಚೇರಿ ಪಾಂಚಜನ್ಯದ ಬಳಿ ಗುರುವಾರದಂದು ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ನೋಟು ಅಪಮೌಲ್ಯ, ಮತ್ತು ಜಿಎಸ್ ಟಿ ಯಿಂದಾಗಿ ಆರಂಭದಲ್ಲಿ ಜನತೆಗೆ ಕೆಲವು ಆಗುತ್ತಿರುವ ತೊಂದರೆಗಳನ್ನು ಗಮನಿಸಿ ಕೇಂದ್ರ ಸರ್ಕಾರ ಕೆಲವೊಂದರ ತೆರಿಗೆಯನ್ನು ಇಳಿಸಿತು.ಆದ್ರೆ ಈ ವಿಚಾರಗಳು ಎಲ್ಲಿಯೂ ಚರ್ಚೆಯೇ ನಡೆಯಲಿಲ್ಲ ಎಂದರು.
ಈ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಮ್ಮ ಅಧಿಕಾರಾವಧಿಯಲ್ಲಿ, ಸಿಆರ್ ಎಫ್ ಯೋಜನೆಯಡಿ ೫೬೯ ಕೋ.ರೂ ಅನುದಾನ ತಂದು ರಾಷ್ಟ್ರ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ದಿಪಡಿಸಲಾಗಿದೆ. ಕಸ್ತೂರಿ ರಂಗನ್ ವರದಿ ಸಂಬಂಧ ಬಡವರನ್ನು ಒಕ್ಕಲೆಬ್ಬಿಸದಂತೆ ಪ್ರಧಾನಿಯವರನ್ನು ಆಗ್ರಹಿಸಲಾಗಿದೆ.ಈ ಬಗ್ಗೆ ಕೋರ್ಟ್ ನಲ್ಲಿ ವಾದಿಸಲು ಉತ್ತಮ ನ್ಯಾಯವಾದಿಗಳನ್ನು ನೇಮಿಸಲಾಗಿದೆ ಎಂದರು.