ಬಾಗೇಪಲ್ಲಿ, ಮಾ29(SS): ಪ್ರಧಾನಿ ಮೋದಿ ಇಡೀ ಜಗತ್ತಿನಲ್ಲಿ ಸುಳ್ಳು ಹೇಳುವುದರಲ್ಲಿ ನಂ. 1 ಆಗಿದ್ದು, ಅವರಿಗೆ ಜಗತ್ ಪ್ರಸಿದ್ದ ನೋಬೆಲ್ ಪ್ರಶಸ್ತಿ ನೀಡಬೇಕು ಎಂದು ಸಂಸದ ಡಾ.ಎಂ.ವೀರಪ್ಪಮೊಯ್ಲಿ ಟೀಕಿಸಿದ್ದಾರೆ.
ನಮ್ಮ ಕಾಂಗ್ರೆಸ್ ಪಕ್ಷ ಹೇಳಿದ ಮಾತು ನಡೆದುಕೊಳ್ಳುತ್ತದೆ. ಮೋದಿ ತರಹ ಸುಳ್ಳು ಹೇಳುವ ಅಗತ್ಯ ನಮಗಿಲ್ಲ, 18ನೇ ಮಹಾ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಈಗಾಗಲೇ ರಾಹುಲ್ ಗಾಂಧಿ ದೇಶದ 25 ಕೋಟಿ ಬಡವರಿಗೆ ಕನಿಷ್ಠ 72 ಸಾವಿರ ಹಾಕುವುದಾಗಿ ಘೋಷಿಸಿದ್ದಾರೆ. ನಾವು ಹೇಳಿದಂತೆ ನಡೆಯುತ್ತೇವೆ ಎಂದು ಭರವಸೆ ನೀಡಿದರು.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಮೋದಿ ಅವರಿಗೆ ಸುಳ್ಳು ಹೇಳುವುದರಲ್ಲಿ ನಂ.1 ಪಟ್ಟ ಕೊಡಬೇಕಿದೆ. 5 ವರ್ಷಗಳ ಹಿಂದೆ ಲೋಕಸಭೆ ಚುನಾವಣೆ ಸಮಯದಲ್ಲಿ ಮೋದಿ ಈ ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇನೆ, ದೇಶದ ಪ್ರತಿ ಖಾತೆಗೆ ಜನ್ಧನ್ ಯೋಜನೆಯಲ್ಲಿ 15 ಲಕ್ಷ ಹಾಕುತ್ತೇನೆ. ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಪ್ರಧಾನಿಯಾದ ಮೇಲೆ ಯಾವ ಭರವಸೆ ಈಡೇರಿಸಿದೆ ಜನರನ್ನು ವಂಚನೆ ಮಾಡಿದ್ದಾರೆ ಎಂದು ದೂರಿದರು.
ಈ ವೇಳೆ ಮಾತನಾಡಿದ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ನಮ್ಮ ಪಕ್ಷದಲ್ಲಿ ಉಚಿತವಾಗಿ ಅಕ್ಕಿ, ಹಾಲು, ಮಕ್ಕಳಿಗೆ ಪುಸ್ತಕ, ಶೂಗಳು ಕೊಡಲಾಗುತ್ತದೆ. ಆದರೆ ಬಿಜೆಪಿ ಹೇಳುವುದೊಂದು ಮಾಡುವುದು ಮೊತ್ತೊಂದು. ದೇಶದಲ್ಲಿ ಜನರಿಗೆ ರಕ್ಷಣೆ ಸಿಗಬೇಕಾದರೆ ಕಾಂಗ್ರೆಸ್ ಗುರ್ತಿಗೆ ಮತ ಹಾಕಬೇಕು, ಇಲ್ಲಿದಿದ್ದರೆ ಪ್ರತಿಯೊಬ್ಬರೂ ಅತ್ಯಂತ ಪ್ರಾಣ ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೋಮುವಾದಿಗಳನ್ನು ದೂರವಿಡುವಂತೆ ವಿನಂತಿಸಿಕೊಂಡಿದ್ದಾರೆ.