ಮುಂಬೈ,ಮೇ14(DaijiworldNews/KH):ಬಾಲಿವುಡ್ ನಟಿ ತುನಿಶಾ ಶರ್ಮಾ 2022ರ ಡಿಸೆಂಬರ್ 24 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಫಿಲ್ಮ್ ಸ್ಟುಡಿಯೋ ಬೆಂಗೆಕಿ ಅಹುತಿಯಾಗಿರುವ ಘಟನೆ ನಡೆದಿದೆ.
ಮುಂಬೈನ ಹೊರವಲಯದ ವಸೈನಲ್ಲಿರುವ ಕಮಾನ್ನಲ್ಲಿರುವ ಭಜನ್ಲಾಲ್ ಸ್ಟುಡಿಯೋಸ್ ಬೆಂಕಿಗೆ ಅಹುತಿಯಾಗಿ ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ ಎಂದು ವಸಾಯಿ-ವಿರಾರ್ ನಗರ ಮುನ್ಸಿಪಲ್ ಕಾರ್ಪೊರೇಷನ್ನ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಮಾಜಿ ಗೆಳೆಯ ಹಾಗೂ ಸಹನಟ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಮಾ. 5 ರಂದು ಶೀಜಾನ್ ಅವರಿಗೆ ಕೋರ್ಟ್ ಜಾಮೀನು ನೀಡಿದೆ.