ಬೆಂಗಳೂರು, ಮೇ 14 (DaijiworldNews/MS): ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 2.6 ಲಕ್ಷಕ್ಕೂ ಅಧಿಕ ಮತದಾರರು 'ನೋಟಾ' ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದೇ 10ರಂದು ನಡೆದಿದ್ದ ಮತದಾನದ ವೇಳೆ 2,59,278 ಮಂದಿ ಯಾವ ಅಭ್ಯರ್ಥಿಯ ಪರವಾಗಿಯೂ ಮತ ಚಲಾಯಿಸಿಲ್ಲ ಎಂಬುದು ಶನಿವಾರ ಮಧ್ಯಾಹ್ನ 3.30ರವರೆಗಿನ ಆಯೋಗದ ಅಂಕಿ ಅಂಶಗಳಿಂದ ದೃಢಪಟ್ಟಿತ್ತು.
ವಿಶೇಷವೆಂದರೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆಲವು ರಾಷ್ಟ್ರೀಯ ಪಕ್ಷಗಳಿಗೂ ಇಷ್ಟು ಮತ ಬಂದಿಲ್ಲ ಆಪ್ ೨೦೯ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ಶೇ. ೦.೫೮ ಮತ ಗಳಿಸಿದೆ.
ವಿದ್ಯುನ್ಮಾನ ಮತಯಂತ್ರಗಳಲ್ಲಿ ೨೦೧೩ರಲ್ಲಿ ನೋಟಾ ಆಯ್ಕೆಯನ್ನು ಪರಿಚಯಿಸಲಾಯಿತು. ಸುಪ್ರೀಂಕೋರ್ಟ್ ಆದೇಶದ ನಂತರ ಚುನಾವಣಾ ಆಯೋಗ ನೋಟಾ ಬಟನ್ ಅನ್ನು ಮತಯಂತ್ರದ ಫಲಕದಲ್ಲಿ ಸೇರಿಸಿತ್ತು.