ಬೆಂಗಳೂರು, ಮೇ 14 (DaijiworldNews/MS): ಬೆಂಗಳೂರಿನ ಜಯನಗರದ ಕರ್ನಾಟಕ ವಿಧಾನಸಭಾ ಕ್ಷೇತ್ರವು ಬಿಜೆಪಿ ಅಭ್ಯರ್ಥಿ ಸಿಕೆ ರಾಮಮೂರ್ತಿ ಮತ್ತು ಕಾಂಗ್ರೆಸ್ ಪ್ರತಿಸ್ಪರ್ಧಿ ಸೌಮ್ಯಾ ರೆಡ್ಡಿ ನಡುವೆ ತೀವ್ರ ಪೈಪೋಟಿಯನ್ನು ಕಂಡು ಅಂತಿಮವಾಗಿ ಬಿಜೆಪಿಯ ಅಭ್ಯರ್ಥಿ ಕೆ. ಸಿ. ರಾಮಮೂರ್ತಿ ಕೇವಲ 16 ಮತಗಳ ಕಡಿಮೆ ಅಂತರದಿಂದ ಗೆದ್ದಿರುವುದಾಗಿ ಚುನಾವಣಾಧಿಕಾರಿಗಳು ಪ್ರಕಟಿಸಿದ್ದಾರೆ. ಆದರೆ, ಈ ಫಲಿತಾಂಶದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಸೋತ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ತಿಳಿಸಿದ್ದಾರೆ.
ಸೌಮ್ಯಾ ರೆಡ್ದಿ ಅವರು ಇಂದು ತಮ್ಮ ಕ್ಷೇತ್ರದ ಫಲಿತಾಂಶವನ್ನು ಮರು ಪರಿಶೀಲನೆ ಮಾಡುವಂತೆ ದೂರು ನೀಡಲಿದ್ದಾರೆ.
ದೂರಿನಲ್ಲಿ ಮೊದಲು ನನಗೆ ಗೆಲುವಾಗಿತ್ತು. ಆದರೆ ಬಿಜೆಪಿಯ ನಾಯಕರಾದ ಆರ್ ಆಶೋಕ್ ಮತ್ತು ತೇಜಸ್ವಿ ಸೂರ್ಯ ಮತ ಎಣಿಕೆ ಕೇಂದ್ರಕ್ಕೆ ಬಂದು ಕುತಂತ್ರ ಮಾಡಿದ್ದಾರೆ. ಪರಿಣಾಮ ನಾನು ಸೋಲು 17 ಮತಗಳ ಅಂತರದಿಂದ ಸೂಲು ಅಬುಭವಿಸಿದ್ದೇನೆ ಈ ಬಗ್ಗೆ ತನಿಖೆ ಮಾಡಬೇಕು ಎಂದು ಕೋರಲಿದ್ದಾರೆ
ಜಯನಗರದ ಕರ್ನಾಟಕ ವಿಧಾನಸಭಾ ಕ್ಷೇತ್ರವು ಬಿಜೆಪಿ ಅಭ್ಯರ್ಥಿ ಸಿಕೆ ರಾಮಮೂರ್ತಿ ಮತ್ತು ಕಾಂಗ್ರೆಸ್ ಪ್ರತಿಸ್ಪರ್ಧಿ ಸೌಮ್ಯಾ ರೆಡ್ಡಿ ನಡುವೆ ತೀವ್ರ ಪೈಪೋಟಿಯನ್ನು ಕಂಡಿತು, ಅಂತಿಮವಾಗಿ ರಾಮಮೂರ್ತಿ ಕೇವಲ 16 ಮತಗಳ ಕಡಿಮೆ ಅಂತರದಿಂದ ಗೆದ್ದರು.