ಬೆಂಗಳೂರು, ಮೇ 15 (DaijiworldNews/HR): 2023ರ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮೇ. 15 ರ ಇಂದು ಕೊನೆಯ ದಿನವಾಗಿದೆ.
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗೆ ಮೇ.15 ರವರೆಗೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಛಾಯಾಪ್ರತಿಯನ್ನು ಪಡೆಯಬೇಕು. ನಂತರವಷ್ಟೇ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕು. ಮರು ಎಣಿಕೆ ಉಚಿತವಾಗಿರುತ್ತದೆ.
ಇನ್ನು ಪೂರಕ ಪರೀಕ್ಷೆಗೆ ಒಂದು ವಿಷಯಕ್ಕೆ 370 ರೂ. 2 ವಿಷಯಕ್ಕೆ 461 ರೂ. ಮತ್ತು ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ 620 ರೂ.ಗಳನ್ನು ನಿಗದಿಮಾಡಲಾಗಿದೆ.
ಮರುಎಣಿಕೆಗೆ / ಮರು ಮೌಲ್ಯಮಾಪನಕ್ಕೆ ಮೇ 15ರಿಂದ ರಿಂದ ಮೇ 21 ರವರೆಗೆ ಅವಕಾಶ ನೀಡಲಾಗಿದೆ.