ಬಾಗಲಕೋಟೆ, ಮೇ 16 (DaijiworldNews/MS): ಸಭೆಯಲ್ಲಿ ಬೀಳಗಿ ಕ್ಷೇತ್ರದ ನೂರಾರು ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು. ಬೀಳಗಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ, ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ.
ಮೇ.15 ಆತ್ಮಾವಲೋಕನ ಸಭೆ ನಡೆಸಿದ್ದು, ಸಭೆಯಲ್ಲಿ ಬೀಳಗಿ ಕ್ಷೇತ್ರದ ನೂರಾರು ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು.ಈ ವೇಳೆ ಕಾರ್ಯಕರ್ತರ ಜೊತೆ ಮಾತನಾಡಿ ಕಣ್ಣೀರು ಹಾಕಿದ್ದಾರೆ.
ಸೋಲಿನ ಬಗ್ಗೆ ಪರಾಮರ್ಶೆ ನಡೆಸುವ ವೇಳೆ ಕಾರ್ಯಕರ್ತರ ಮಾತು ಕೇಳಿ, ನಿರಾಣಿ ಕಣ್ಣೀರು ಹಾಕಿದರು. ಜನರ ಆಶೀರ್ವಾದಕ್ಕೆ ತಲೆ ಬಾಗುತ್ತೇನೆ, ನನಗೆ 85 ಸಾವಿರ ಮತ ನೀಡಿದ ಮತದಾರರಿಗೆ ಧನ್ಯವಾದಗಳು ಬೋಗಸ್ ಗ್ಯಾರಂಟಿಗಳು ಸೋಲಿಗೆ ಕಾರಣವಾಯಿತು. ಇಂತಹ ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದೆ ಎಂದು ನಿರಾಣಿ ಆರೋಪಿಸಿದರು.