ಬೆಂಗಳೂರು, ಮೇ 16 (DaijiworldNews/MS): ಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್, ತಾನು ಘೋಷಣೆ ಮಾಡಿರುವ ಉಚಿತ ಭಾಗ್ಯಕ್ಕೆ ಬರೋಬ್ಬರಿ 62000 ಕೋಟಿ ರೂ. ಬೇಕಾಗಿರುವುದಾಗಿ ವರದಿಯಾಗಿದೆ.
ಮಹಿಳೆಯರ ಖಾತೆಗೆ ತಿಂಗಳಿಗೆ 2000ರೂ. ನಗದು ಮತ್ತು ಉಚಿತ 200 ಯುನಿಟ್ ವಿದ್ಯುತ್ ಸೇರಿ 5 ಗ್ಯಾರಂಟಿ ಘೋಷಣೆ ಮಾಡಿದ್ದು ಇದು ಸರ್ಕಾರಕ್ಕೆ ಬಹು ದೊಡ್ಡ ಆರ್ಥಿಕ ಹೊರೆಯಾಗಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಅಂದರೆ ಸರ್ಕಾರದ ಒಟ್ಟು ಬಜೆಟ್ನ ಶೇ.20ರಷ್ಟು ಹಣವನ್ನು ಈ ಉಚಿತ ಭಾಗ್ಯಕ್ಕಾಗಿಯೇ ಮೀಸಲಿಡಬೇಕಾಗಿದೆ. ಈ ದೊಡ್ಡ 'ಹೊರೆ'ಯಿಂದಾಗಿ ರಾಜ್ಯ ಬಜೆಟ್ ಮೇಲೆ ದೊಡ್ಡ ನಕಾರಾತ್ಮಕ ಪ್ರಭಾವ ಉಂಟಾಗಲಿದೆ. ಅಲ್ಲದೇ ಇದಕ್ಕೆ ಖರ್ಚು ಮಾಡುವ ಮೊತ್ತ ಹಿಂದಿನ ಹಣಕಾಸು ವರ್ಷದ ವಿತ್ತೀಯ ಕೊರತೆಯಷ್ಟೇ ದೊಡ್ಡದಾಗಿದೆ.