ಬೆಂಗಳೂರು, ಮೇ 16 (DaijiworldNews/MS): ನನ್ನ ಅಣ್ಣ ಡಿ.ಕೆ ಶಿವಕುಮಾರ್ ಪಕ್ಷಕ್ಕಾಗಿ ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಹೀಗಾಗಿ ಅವರೇ ಸಿಎಂ ಆಗಬೇಕು ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, "ಪಕ್ಷ ಸಂಕಷ್ಟದಲ್ಲಿದ್ದಾಗ ಅಣ್ಣ ಡಿಕೆಶಿ ಹಿಂಜರಿಯದೇ ಪಕ್ಷ ಸಂಘಟನೆ ಮಾಡಿ ಬೆಳೆಸಿದ್ದಾರೆ ಸತತವಾಗಿ 3 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿ ಸೋನಿಯಾ ಗಾಂಧಿಯವರಿಗೆ ಹಾಗೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತು ಕೊಟ್ಟಂತೆ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ನನ್ನ ನಿರೀಕ್ಷೆ ಪ್ರಕಾರ ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು" ಎಂದು ಹೇಳಿದ್ದಾರೆ
ಮುಂದಿನ ತೀರ್ಮಾನ ಪಕ್ಷದ ವರಿಷ್ಟರು ತೆಗೆದುಕೊಳ್ಳುತ್ತಾರೆ. ಒಟ್ಟಾರೆ ನಮ್ಮ ಜವಾಬ್ದಾರಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವುದಾಗಿತ್ತು ಎಂದು ಹೇಳಿದ್ದಾರೆ.