ದೆಹಲಿ, ಮೇ 16 (DaijiworldNews/HR): ದಕ್ಷಿಣ ದೆಹಲಿಯ ಪುಷ್ಪ್ ವಿಹಾರ್ನಲ್ಲಿರುವ ಅಮೃತಾ ಶಾಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳಕ್ಕೆ ಬೆದರಿಕೆ ಮೇಲ್ ಬಂದಿದೆ ಎಂದು ವರದಿಯಾಗಿದೆ.
ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ಕಾರ್ಯಚರಣೆ ನಡೆಸುತ್ತಿದ್ದು, ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅಮೃತಾ ಶಾಲೆಯ ಮಕ್ಕಳನ್ನು ದೆಹಲಿಯ ಖಾಸಗಿ ಶಾಲೆಯೊಂದಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಹಿಂದೆ ಮಥುರಾ ರಸ್ತೆಯಲ್ಲಿರುವ ‘ದಿ ಡೆಲ್ಲಿ ಪಬ್ಲಿಕ್ ಸ್ಕೂಲ್’ (ಡಿಪಿಎಸ್) ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಮೇಲ್ ಬಂದ ಹದಿನೈದು ದಿನಗಳ ನಂತರ, ಪೊಲೀಸರು ಶಾಲೆ ಬಳಿ ಕಾರ್ಯಚರಣೆ ನಡೆಸಿದ್ದಾರೆ.
ಇಮೇಲ್ ಐಡಿ ಡಿಪಿಎಸ್ನ ವಿದ್ಯಾರ್ಥಿಗೆ ಲಿಂಕ್ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಕಂಡುಬಂದಿದ್ದು, ಈ ಕುರಿತು ವಿದ್ಯಾರ್ಥಿಯು ಕೌನ್ಸೆಲಿಂಗ್ ಮಾಡಲಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿ ನಾವು ಕೇವಲ ಮೋಜಿಗಾಗಿ ತಮಾಷೆಗಾಗಿ ಮಾಡಿದ್ದು ಎಂದು ಪೊಲೀಸರಿಗೆ ತಿಳಿಸಿದ್ದಾನೆ.