ದೊಡ್ಡಬಳ್ಳಾಪುರ, ಮಾ30(SS): ಎತ್ತಿನ ಹೊಳೆ ಯೋಜನೆ ಬರೀ ಕಾಸು ಹೊಡೆಯುವ ಯೋಜನೆಯೇ ಹೊರತು ಬಯಲುಸೀಮೆಗೆ ನೀರು ನೀಡುವ ಯೋಜನೆಯಾಗಿಲ್ಲ. ಎತ್ತಿನ ಹೊಳೆ ಯೋಜನೆ ಎಂಬ ಆಟ ನಿಜವಾದ ನೀರುಣಿಸುವ ಯೋಜನೆಯಾಗಿಲ್ಲ ಅದು ಹಣ ಲೂಟಿ ಮಾಡುವ ಆಟವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಚ್ಚೇಗೌಡ ಟೀಕಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ 9 ಸಾವಿರ ಕೋಟಿ ಹಣವನ್ನು ಎತ್ತಿನಹೊಳೆ ಯೋಜನೆಗೆ ಮೀಸಲಿಟ್ಟಿದ್ದರು. ಆ ಹಣವನ್ನು ಕಾಂಗ್ರೆಸ್ ಸರಕಾರ, ಪ್ರಸಕ್ತ ಸಮ್ಮಿಶ್ರ ಸರಕಾರಗಳು ಕೊಳ್ಳೆ ಹೊಡೆಯುತಿವೆ. ಮಾರ್ಚ್ ತಿಂಗಳಲ್ಲೆ ನೀರಿನ ಅಭಾವ ಆರಂಭವಾಗಿದೆ ಇನ್ನು ಜುಲೈನಲ್ಲಿ ಮಳೆಯಾಗುವವರೆಗೂ ಕ್ಷೇತ್ರದಲ್ಲಿ ಜಲ ಕ್ಷಾಮ ಎದುರಾಗಲಿದೆ. ಇಂತಹ ಪರಿಸ್ಥಿತಿ ಇದ್ದರೂ ಶಾಶ್ವತ ನೀರಾವರಿ ಕಲ್ಪಿಸುವಲ್ಲಿ ಸಣಸದ ವೀರಪ್ಪಮೋಯ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಅಸ್ತ್ರವಾಗಿ ಮೋಯ್ಲಿ ಅವರು ಎತ್ತಿನ ಹೊಳೆ ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಕೃಷ್ಣೆ ಬಂದರೂ ಎತ್ತಿನಹೊಳೆ ಬರೋಲ್ಲ. ಗೌರಿಬಿದನೂರಿಗೆ ದೂರದ ಕೃಷ್ಣಾ ನದಿಯಿಂದ ನೀರು ತರುವ ಪ್ರಸ್ತಾಪವಿದೆ. ಕೃಷ್ಣೆ ಬಂದರೂ ಎತ್ತಿನಹೊಳೆ ಬರುವ ಸಾಧ್ಯತೆ ಇಲ್ಲ ಎಂದು ವ್ಯಂಗ್ಯ ಮಾಡಿದರು.
ನಾವೆಲ್ಲ ಚೌಕಿದಾರರಾಗಿ ಮೋದಿಯನ್ನು ಪ್ರಧಾನಿ ಮಾಡಬೇಕು. ದೇಶದಲ್ಲಿ 18 ಕೋಟಿ ನಾಯಕ ಸಮುದಾಯದ ಮತಗಳಿದ್ದು, ಈ ಬಾರಿ ಸಮುದಾಯ ಮೋದಿಯ ಗೆಲುವಿಗೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.