ನವದೆಹಲಿ,ಮೇ22(DaijiworldNews/KH):ಎರಡು ಸಾವಿರ ರೂ. ಮುಖಬೆಲೆಯ ನೋಟುಗಳು ಸೆ.30ರ ನಂತರವೂ ಕಾನೂನುಬದ್ಧವಾಗಿ ಮುಂದುವರಿಯುವ ಕಾರಣ ಗ್ರಾಹಕರು ಅವಸರದಲ್ಲಿ ಬ್ಯಾಂಕ್ ಗಳಿಗೆ ಧಾವಿಸುವ ಅಗತ್ಯವಿಲ್ಲ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, 2 ಸಾವಿರದ ನೋಟುಗಳನ್ನು ಬ್ಯಾಂಕುಗಳಲ್ಲಿ ದಿನಕ್ಕೆ ವ್ಯಕ್ತಿಯೊಬ್ಬರಿಗೆ 20 ಸಾವಿರದಂತೆ ಬದಲಾವಣೆ ಮಾಡಿಕೊಳ್ಳಲು ಸೆ.30 ರವರೆಗೆ ಅವಕಾಶವಿದೆ. ಸೆ. 30ರ ನಂತರವೂ 2ಸಾವಿರ ಮುಖಬೆಲೆಯ ನೋಟುಗಳಿಗೆ ಮಾನ್ಯತೆ ಇರುತ್ತದೆ, ಆದರೆ ಅದಷ್ಟು ನೋಟುಗಳನ್ನು ವಾಪಾಸು ಪಡೆಯುವ ಉದ್ದೇಶದಿಂದ ಗಡುವು ನೀಡಲಾಗಿದೆ ಮತ್ತು ಪರಿಸ್ಥಿತಿಯನ್ನು ಗಮನಿಸಿಕೊಂಡು ಸೆಪ್ಟೆಂಬರ್ ತಿಂಗಳ ಗಡುವನ್ನು ಪರಿಶೀಲನೆ ಮಾಡಲಾಗುತ್ತದೆ ಎಂದರು.
ರೂ 2000 ಮುಖಬೆಲೆಯ ಬ್ಯಾಂಕ್ನೋಟನ್ನು ನವೆಂಬರ್ 2016 ರಲ್ಲಿ ಪರಿಚಯಿಸಲಾಯಿತು, ಪ್ರಾಥಮಿಕವಾಗಿ ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಎಲ್ಲಾ ರೂ 500 ಮತ್ತು ರೂ 1000 ಬ್ಯಾಂಕ್ನೋಟುಗಳ ಕಾನೂನು ಟೆಂಡರ್ ಸ್ಥಿತಿಯನ್ನು ಹಿಂತೆಗೆದುಕೊಂಡ ನಂತರ ಆರ್ಥಿಕತೆಯ ಕರೆನ್ಸಿ ಅಗತ್ಯವನ್ನು ತ್ವರಿತವಾಗಿ ಪೂರೈಸಲಿದೆ ಎಂದರು.