ಭೋಪಾಲ್,ಮೇ22(DaijiworldNews/KH):ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಯುವಕಯೊಬ್ಬ ಕ್ರೂರವಾಗಿ ನವಿಲಿನ ಗರಿಯನ್ನು ಕಿತ್ತು ತೆಗೆಯುತ್ತಿರುವ ದೃಶ್ಯ ವೈರಲ್ ಆದ ನಂತರ ಯುವಕನ ಮೇಲೆ ದೂರು ದಾಖಲಿಸಿರುವ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ಕಾತ್ನಿ ಜಿಲ್ಲೆಯ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊಂದನ್ನು ಆಧರಿಸಿ ತನಿಖೆ ನಡೆಸಿದ ಬಳಿಕ ರಿಧಿ ನಗರದ ಕತ್ನಿ ನಿವಾಸಿ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿವಿಷನಲ್ ಫಾರೆಸ್ಟ್ ಆಫೀಸರ್(DFO) ಗೌರವ್ ಶರ್ಮಾ, ಯುವಕಯೊಬ್ಬ ಕ್ರೂರವಾಗಿ ನವಿಲು ಗರಿಯನ್ನು ಕೀಳುತ್ತಿರುವ ವಿಡಿಯೋವನ್ನು ಗುಜರಾತ್ ಮೂಲದ ಎನ್ ಜಿಒ ಶೇರ್ ಮಾಡಿದ್ದು, ಈ ಕುರಿತು ತನಿಖೆ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.
ಇನ್ನು ಆರೋಪಿ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.