ಹೈದರಾಬಾದ್, ಮೇ 23 (DaijiworldNews/HR): ಹೈದರಾಬಾದ್ನಲ್ಲಿ ಡೆಲಿವರಿ ಸಾಮಾಗ್ರಿಯನ್ನು ಗ್ರಾಹಕನ ಮನೆಗೆ ತಲುಪಿಸುವ ವೇಳೆ ಮನೆಯ ನಾಯಿಯೊಂದು ಅಟ್ಟಾಡಿಸಿಕೊಂಡು ಬಂದ ಪರಿಣಾಮ ಮೂರನೇ ಮಹಡಿಯಿಂದ ಡೆಲಿವರಿ ಏಜೆಂಟ್ ಹಾರಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಘಟನೆ ನಡೆದಿದೆ.
ಹೈದರಾಬಾದ್ನ ಪಂಚವಟಿ ಕಾಲೋನಿಯಲ್ಲಿರುವ ಪಾರ್ಟ್ಮೆಂಟ್ ನ ಮೂರನೇ ಮಹಡಿಯಲ್ಲಿ ಗ್ರಾಹಕನ ಮನೆಗೆ ಹಾಸಿಗೆಯನ್ನು ಡೆಲಿವರಿಯ ಮಾಡಲು ಹೋಗಿದ್ದು, ಈ ವೇಳೆ ಗ್ರಾಹಕನ ಮನೆಯ ಬಾಗಿಲನ್ನು ಬಡಿದಾಗ ಡಾಬರ್ಮನ್ ನಾಯಿ ಡೆಲಿವರಿ ಏಜೆಂಟ್ ನ ಬಳಿ ಬಂದಿದ್ದು, ಜೀವ ಭಯದಿಂದ ಡೆಲಿವರಿ ಏಜೆಂಟ್ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ.
ಇನ್ನು ರಾಯದುರ್ಗಂ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 289 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಸಂಬಂಧ ತೆಲಂಗಾಣ ಗಿಗ್ ಮತ್ತು ಪ್ಲಾಟ್ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಪಿಡಬ್ಲ್ಯೂಯು) ಪ್ರಕಟಣೆಯಲ್ಲಿ ನಾಯಿಯ ಮಾಲೀಕರು ವಿತರಣಾ ಕಾರ್ಯನಿರ್ವಾಹಕರ ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕೆಂದು ಒತ್ತಾಯಿಸಿದೆ.