ನವದೆಹಲಿ, ಮೇ 23 (DaijiworldNews/HR): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಸಿವಿಲ್ ಸರ್ವೀಸಸ್ 2022 ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟವಾಗಿದ್ದು, ಇಶಿತಾ ಕಿಶೋರ್ ಅವರು ನಂ.1 ರ್ಯಾಂಕ್ ಪಡೆದುಕೊಂಡಿದ್ದಾರೆ.
ಇಶಿತಾ ಕಿಶೋರ್ ಆಲ್ ಇಂಡಿಯಾ ರ್ಯಾಂಕ್ - 1 (AIR 1)ಅನ್ನು ಪಡೆದುಕೊಂಡಿದ್ದು, ನಂತರ ಗರಿಮಾ ಲೋಹಿಯಾ, ಉಮಾ ಹರತಿ ಎನ್. ಹಾಗೂ ಸ್ಮೃತಿ ಮಿಶ್ರಾ ಅವರು ಕ್ರಮವಾಗಿ 2ನೇ, 3ನೇ ಹಾಗೂ 4ನೇ ಸ್ಥಾನ ಪಡೆದಿದ್ದಾರೆ.
ವ್ಯಕ್ತಿತ್ವ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್- upsc.gov.in. ನಲ್ಲಿ ಪರಿಶೀಲಿಸಬಹುದು.