ಜೈಪುರ, ಮೇ 24 (DaijiworldNews/HR): ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ ಮಧ್ಯ ವಯಸ್ಕನೊಂದಿಗೆ ಮದುವೆ ಮಾಡಿಕೊಡಲು 7 ವರ್ಷದ ಬಾಲಕಿಯನ್ನು 4.50 ಲಕ್ಷ. ರೂ.ಗೆ ಮಾರಾಟ ಮಾಡಿರುವ ಘಟನೆ ನಡೆದಿದೆ.
38 ವರ್ಷದ ಭೂಪಾಲ್ ಸಿಂಗ್ ಎಂಬಾತ ಬಾಲಕಿಯ ತಂದೆಗೆ 4.50 ಲಕ್ಷ ರೂ.ವನ್ನು ಕೊಟ್ಟು ಬಾಲಕಿಯನ್ನು ಖರೀದಿಸಿದ್ದು, ಆದಾದ ಬಳಿಕ ಮೇ.21 ರಂದು ಬಾಲಕಿಯನ್ನು ವಿವಾಹವಾಗಿದ್ದಾರೆ.
ಇನ್ನು ಮಧ್ಯ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭೂಪಾಲ್ ಸಿಂಗ್ ಕುಟುಂಬದ ಕೆಲ ಸದಸ್ಯರು ಜೈಲು ಶಿಕ್ಷೆ ಅನುಭವಿಸಿದ ಬಳಿಕ ಅವರ ಕುಟುಂಬ ರಾಜಸ್ಥಾನದಲ್ಲಿ ಬಂದು ನೆಲೆಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಅವರು ಬಾಲಕಿಯನ್ನು ಪತ್ತೆ ಹಚ್ಚಿ, ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನವ ವಿವಾಹಿತೆಯಂತೆ ಆಕೆಯ ಕೈ ಮೇಲೆ ಮೆಹೆಂದಿಯನ್ನು ಹಾಕಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಹೇಳಿದ್ದಾರೆ.