ಬೆಂಗಳೂರು, ಮಾ30(SS): ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಸರ್ಕಾರಿ ಶಾಲೆಯ ಮಹತ್ವ ತಿಳಿಸಿದ ರುಬಿನಾಗೆ ಶಿಕ್ಷಣ ಇಲಾಖೆ ಅಭಿನಂದನೆ ಸಲ್ಲಿಸಿದೆ.
ಶಿಕ್ಷಣ ಇಲಾಖೆ ನಿರ್ದೇಶಕ ಜಯಕುಮಾರ್ ವಿದ್ಯಾರ್ಥಿನಿ ರುಬಿನಾಗೆ ಪ್ರಶಂಸಾ ಪತ್ರ ನೀಡಿ ಗೌರವಸಿದ್ದಾರೆ. ‘ರಾಜಕುಮಾರ’ ಚಿತ್ರದ `ಬೊಂಬೆ ಹೇಳುತೈತೆ’ ಹಾಡಿಗೆ ತನ್ನ ಸರ್ಕಾರಿ ಶಾಲೆಯ ಬಗ್ಗೆ ಬರೆದು ಸರಿಗಮಪ ವೇದಿಕೆಯಲ್ಲಿ ಹಾಡಿದ್ದಳು. ತೀರ್ಪುಗಾರರಾದ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಈ ಹಾಡು ಕೇಳಿ ಇಷ್ಟಪಟ್ಟಿದ್ದರು.
ರುಬಿನಾ ಹಾವೇರಿ ಜಿಲ್ಲೆಯ ಮೇವುಂಡಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ. ಈಕೆ ತನ್ನ ಹಾಡಿನ ಮೂಲಕ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಶಾಲೆಯ ಮಹತ್ವ ತಿಳಿಸಿದ್ದಳು.
ಇದೀಗ ರುಬಿನಾ ಗಾಯನಕ್ಕೆ ಶಿಕ್ಷಣ ಇಲಾಖೆ ಮನಸೋತಿದ್ದಲ್ಲದೆ, ಈ ಹಾಡಿನ ಸಾಲುಗಳು ಬರೆದ ಶಿಕ್ಷಕರಿಗೂ ಇಲಾಖೆ ಅಭಿನಂದನೆ ಸಲ್ಲಿಸಿದೆ.