ಹುಬ್ಬಳ್ಳಿ, ಮೇ 26(DaijiworldNews/MS): ನೈಋತ್ಯ ರೈಲ್ವೆಯು ಕಳೆದ ಆರ್ಥಿಕ ವರ್ಷದಲ್ಲಿ ನಾನಾ ಸೇವೆಗಳ ಮೂಲಕ 8070 ರೂ. ಕೋಟಿ ಆದಾಯ ಗಳಿಕೆ ಮಾಡಿದ್ದು, ವಲಯ ಸ್ಥಾಪನೆಯಾದ ಬಳಿಕ ಈವರೆಗೆ ಗಳಿಸಿದ ಅತ್ಯಧಿಕ ವಾರ್ಷಿಕ ಆದಾಯ ಗಳಿಸಿದ ದಾಖಲೆ ಇದಾಗಿದೆ.
2022-23ರ ಅವಧಿಯಲ್ಲಿ ಪ್ರಯಾಣಿಕರ ಸಂಚಾರದಿಂದ 2756 ಕೋಟಿ, ಸರಕು ಸಾಗಣೆಯಿಂದ 4696 ಕೋಟಿ, ವಿವಿಧ ಮೂಲಗಳಿಂದ 384 ಕೋಟಿ ಮತ್ತು ಇತರೆ ಮೂಲಗಳಿಂದ 271 ಕೋಟಿ ರೂ. ಗಳಿಸಿವೆ.
ಅಷ್ಟೇಅಲ್ಲ, ಮೊದಲ ಬಾರಿಗೆ ವಲಯದ ಒಟ್ಟು ಆದಾಯ ಕೂಡ 8 ಸಾವಿರ ಕೋಟಿಯನ್ನು ದಾಟಿದೆ. ಇನ್ನು ಈ ಅವಧಿಯಲ್ಲಿ ಒಟ್ಟು 15.34 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಇದು ಕೂಡ ಹೊಸ ದಾಖಲೆಯಾಗಿದೆ.
ಒಟ್ಟಾರೆ 2022-23ರಲ್ಲಿನ ಒಟ್ಟು ಆದಾಯವು 2021-22ರಲ್ಲಿ ದಾಖಲಾದ ಶೇ.30ಕ್ಕಿಂತ ಹೆಚ್ಚಾಗಿದೆ ಎಂದು ವರದಿಯಾಗಿದೆ