ನವದೆಹಲಿ, ಮೇ 26 (DaijiworldNews/HR): ಪ್ರಧಾನಿ ಮೋದಿ ಇಡೀ ದೇಶದ ಜನರ ಆಶೀರ್ವಾದವನ್ನು ಪಡೆಯುವುದರಿಂದ ನಿಮ್ಮ ಬಹಿಷ್ಕಾರ ಮುಖ್ಯವಲ್ಲ ಎಂದು ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಿದ ಪ್ರತಿಪಕ್ಷಗಳಿಗೆ ಗೃಹ ಸಚಿವ ಅಮಿತ್ ಶಾ ತಿರುಗೇಟಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನರೇಂದ್ರ ಮೋದಿ ಅವರು ಎರಡು ಬಾರಿ ಜನಪ್ರಿಯ ಜನಾದೇಶದೊಂದಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವುದರಿಂದ ಬಹಿಷ್ಕಾರವು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದರು.
ಇನ್ನು ಪ್ರಧಾನಿ ಮೋದಿ ಇಡೀ ದೇಶದ ಜನರ ಆಶೀರ್ವಾದವನ್ನ ಪಡೆಯುವುದರಿಂದ ನಿಮ್ಮ ಬಹಿಷ್ಕಾರ ಮುಖ್ಯವಲ್ಲ ಎಂದು ನಾನು ಕಾಂಗ್ರೆಸ್ ನಾಯಕರಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ. 300ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕೆಂದು ಇಡೀ ದೇಶ ಬಯಸುತ್ತದೆ ಎಂದಿದ್ದಾರೆ.
ಹೊಸ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ನಿರ್ಧಾರವು ಕ್ಷುಲ್ಲಕ, ಪಕ್ಷಪಾತದ ರಾಜಕೀಯ ಮತ್ತು ಸ್ಪಷ್ಟ ಬಹುಮತದೊಂದಿಗೆ ಸತತ ಎರಡು ಬಾರಿ ಗೆದ್ದಿರುವ ಪ್ರಧಾನಿಯ ಬಗ್ಗೆ ಅವರು ಹೊಂದಿರುವ ಹಗೆತನಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.