ನವದೆಹಲಿ, ಮೇ 28 (DaijiworldNews/HR): ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾದ ಉದ್ಘಾಟನಾ ಕಾರ್ಯಕ್ರಮ ನಡೆಯಲು ಸಿದ್ದತೆ ಆಗುತ್ತಿದ್ದು, ಇತ್ತ ಸಂಸತ್ ಭವನದ ಉದ್ಘಾಟನೆಯ ಮುನ್ನಾ ದಿನ ರಾಜದಂಡ `ಸೆಂಗೋಲ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಗೆ ಹಸ್ತಾಂತರ ಮಾಡಲಾಗಿದೆ.
ಲೋಕಸಭೆ ಸ್ಪೀಕರ್ ಕುರ್ಚಿ ಪಕ್ಕದಲ್ಲಿ ರಾಜದಂಡ ಅಳವಡಿಸಲಾಗಿದ್ದು, ಸುದೀರ್ಘ ಇತಿಹಾಸ ಹೊಂದಿರುವ ಚಿನ್ನದ ರಾಜದಂಡ ಇದಾಗಿದೆ.
ಸಂಸತ್ ಭವನ ಉದ್ಘಾಟನೆಗೆ ರಾಜ್ಯದ ಪುರೋಹಿತರ ನೇತೃತ್ವ ವಹಿಸಿದ್ದು, ಶೃಂಗೇರಿಯ ಶಾರದಾ ಪೀಠದ ಪುರೋಹಿತರಿಂದ ಬೆಳಗ್ಗೆ 7:30ರಿಂದಲೇ ಹೋಮ, ಪೂಜಾ ಕೈಂಕರ್ಯ ಆರಂಭವಾಗಿದೆ. ಪ್ರಧಾನಿ ಮೋದಿ ಸಮ್ಮುಖದಲ್ಲಿ ವಿಶೇಷ ಪೂಜೆ, ಹೋಮ-ಹವನ ನಡೆದಿದೆ.
ಭಾರತದ ಸ್ವಾತಂತ್ರ್ಯವನ್ನು ಗುರುತಿಸುವ ರಾಜದಂಡವನ್ನು ತಯಾರಿಸುವ ಹೊಣೆಯನ್ನು ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ವಹಿಸಿದ್ದರು.