ರಾಜಸ್ಥಾನ, ಮೇ 30 (ದೈಜಿವರ್ಲ್ಡ್ ನ್ಯೂಸ್/ಕೆಎಚ್): ಬಾನೆತ್ತರಕ್ಕೆ ನಿರ್ಮಿಸಿದ್ದ ಬೃಹತ್ ಮೊಬೈಲ್ ಟವರ್ ಗಾಳಿ ರಭಸಕ್ಕೆ ಉರುಳಿ ಬಿದ್ದ ಆಶ್ಚರ್ಯಕಾರಿ ಘಟನೆ ರಾಜಸ್ಥಾನದ ನಗೌರ್ನಲ್ಲಿ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ 16 ಸೆಕೆಂಡ್ಗಳ ವೀಡಿಯೊ ಕ್ಲಿಪ್ ಮೊಬೈಲ್ ಟವರ್ ಎತ್ತರದಲ್ಲಿ ನಿಂತಿದೆ, ನಂತರ ಅದು ರಣಬೀಕರ ಚಂಡಮಾರುತದ ಗಾಳಿಗೆ ಅದು ಹೇಗೆ ಬೀಳುತ್ತದೆ ಎಂದು ಈ ವೀಡಿಯೊದಲ್ಲಿ ತೋರಿಸಲಾಗಿದೆ.
ಜಿಲ್ಲೆಯಲ್ಲಿ ಭೀಕರ ಬಿರುಗಾಳಿ ಬೀಸಲಿದೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಬೆನ್ನಲ್ಲೇ ಚಂಡಮಾರುತ ಬೀಸಿದ್ದು, ಮೊಬೈಲ್ ಟವರ್ ಮಾತ್ರ ನೆಲಸಮವಾಗದೆ, ಇನ್ನೂ ಕೆಲವು ಕಡೆ ಮನೆಗಳು ಕುಸಿದು ಬಿದ್ದಿದ್ದು, ಜೋರಾದ ಗಾಳಿಗೆ ಗುಡಿಸಲು ಹಾರಿ ಹೋಗಿದೆ.
ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳನ್ನು ನೋಡಿದ ಜನರು ಬೇರೆ ಬೇರೆ ರೀತಿಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕೆಲವು ಜನರು , ಟವರ್ , ತನ್ನ ಕಳಪೆ ಡಿಸೈನ್ ಹಾಗೂ ನಿರ್ಮಾಣದ ಕ್ವಾಲಿಟಿಯಿಂದಾಗಿ ಬಿದ್ದಿದೆ. ಹೀಗಾಗಿ ಟವರ್ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ವೆದರ್ಮ್ಯಾನ್ ಶುಭಂ (@shubhamtorres09) ಮೇ 28, 2023