ಹುಬ್ಬಳ್ಳಿ, ಮೇ 31 (DaijiworldNews/HR): ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ನಮಗೆ ದೊಡ್ಡ ಶಕ್ತಿ ತಂದಿದೆ. ಅವರ ಅನುಭವ ಹಾಗೂ ಶಕ್ತಿಯನ್ನು ಪಕ್ಷ ಸದ್ಬಳಿಕೆ ಮಾಡಿಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಶೆಟ್ಟರ, ಶ್ರೀನಿವಾಸ, ಲಕ್ಷ್ಮಣ ಸವದಿ ಅವರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. ಶೆಟ್ಟರ ಹಾಗೂ ಸವದಿ ಅವರಿಗೆ ಹೈಕಮಾಂಡ್ ಹಾಗೂ ಎಐಸಿಸಿ ಅಧ್ಯಕ್ಷರ ಸಂದೇಶವನ್ನು ಇವರಿಗೆ ಮುಟ್ಟಿಸಿದ್ದೇನೆ. ಮುಂದಿನ ಲೋಕಸಭೆ ಚುನಾವಣೆ ತಯಾರಿ ಹಾಗೂ ಸಂಘಟನೆ ಕುರಿತು ಮಾತನಾಡಿದ್ದೇವೆ ಎಂದರು.
ಇನ್ನು ಜಗದೀಶ್ ಶೆಟ್ಟರ್ ಜೊತೆ ನಾವು ಇರುತ್ತೇವೆ. ನಮಗೆ ವರಿಷ್ಠರ ಆದೇಶ ಇದೆ. ಶೆಟ್ಟರ ಅವರಿಗೆ ಸ್ಥಾನಮಾನ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಒಂದೇ ಮಾತಿನಲ್ಲಿ ಹೇಳುತ್ತೇನೆ ಎಂದು ಹೇಳಿದ್ದಾರೆ.