ಬೆಂಗಳೂರು, ಜೂ 01 (DaijiworldNews/HR): ಕರ್ನಾಟಕ ಮತ್ತು ತಮಿಳುನಾಡು ನೀರಿಗಾಗಿ ಕಚ್ಚಾಟ ಸಾಕು. ಕೋರ್ಟ್ ಕಚೇರಿ ಅಲೆದು ಏನೂ ಪ್ರಯೋಜನ ಆಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ನಾವು ನೀರಿಗೋಸ್ಕರ ನಡೆದಿದ್ದೇವೆ. ತಮಿಳುನಾಡಿಗೆ ಯಾವುದೇ ತರಹದ ಸಮಸ್ಯೆ ಇಲ್ಲ. ನಮ್ಮ ಹೋರಾಟ ಆದ ಮೇಲೆ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 1 ಸಾವಿರ ಕೋಟಿ ರೂ. ಮೀಸಲಿಟ್ಟು ಪ್ರಸ್ತಾವನೆ ಮಾಡಿದ್ದಾರೆ. ಅದನ್ನು ಖರ್ಚು ಮಾಡುತ್ತೇವೆ ಎಂದರು.
ಇನ್ನು ನಮಗೇನು ತಮಿಳುನಾಡಿನ ಮೇಲೆ ದ್ವೇಷ ಇಲ್ಲ, ಅವರೊಂದಿಗೆ ಯುದ್ದ ಮಾಡಬೇಕೆಂದಿಲ್ಲ. ಅಲ್ಲಿರುವವರು ನಮ್ಮ ಅಣ್ಣ- ತಮ್ಮಂದಿರು. ಅಲ್ಲಿರುವವರ ಅಣ್ಣ-ತಮ್ಮಂದಿರು ಇಲ್ಲಿದ್ದಾರೆ. ಯಾರ ಮೇಲೂ ದ್ವೇಷ-ಅಸೂಯೆ ಮಾಡಬೇಕಾಗಿಲ್ಲ ಎಂದಿದ್ದಾರೆ.